ಈ ವೇಳೆ ಮಾತನಾಡಿದ ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿಯವರು " ಮಾಜಿ ಸಚಿವರಾದ ಆರ್. ವಿ.ದೇಶಪಾಂಡೆಯವರು ನಮ್ಮ ಕ್ಷೇತ್ರಕ್ಕೆ ಆಗಮಿಸಿ ಕೊರೋನ ಸೋಂಕಿತರಿಗೆ ಹಾಗೂ ಕೊರೋನ ವಾರಿಯರ್ಸ್ ಗಳಿಗೆ ಮೆಡಿಕಲ್ ಕಿಟ್ ಗಳನ್ನು ವಿತರಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಕೆಲವು ದಿನಗಳ ಹಿಂದೆಯೂ ಜಿಲ್ಲೆಯ ಪ್ರತಿಯೊಂದು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಗಳನ್ನು ವಿತರಸಿ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಯುವ ಮುಖಂಡರಾದ ಶ್ರೀ ಪ್ರಶಾಂತ್ ದೇಶಪಾಂಡೆಯವರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ .ಇಬ್ಬರಿಗೂ ಪಕ್ಷದ ಕಾರ್ಯಕರ್ತರ ವತಿಯಿಂದ ಹಾಗೂ ಕ್ಷೇತ್ರದ ಜನತೆಯ ಪರವಾಗಿ ತುಂಬುಹೃದಯದ ಅಭಿನಂದನೆ ಸಲ್ಲಿಸುತ್ತೇನೆೆ.
ಕಾರ್ಯಕ್ರಮದ ರುವಾರಿಗಳಾದ ಮಾಜಿ ಸಚಿವರಾದ ಆರ್. ವಿ.ದೇಶಪಾಂಡೆಯವರು ಮಾತನಾಡಿ" ಕೊರೋನ ನಿರ್ಮೂಲನೆಯಲ್ಲಿ ಕೊರೋನ ವಾರಿಯರ್ಸ್ ಗಳು ಸ್ವಯಂ ಪ್ರೇರಣೆಯಿಂದ ಅತ್ಯಂತ ನಿಷ್ಠೆಯಿಂದ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಉತ್ತೇಜನ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ನಾನು ಹಲವಾರು ವರ್ಷಗಳ ಕಾಲ ಜಿಲ್ಲೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಜಿಲ್ಲೆಯ ಜನ ಅವಕಾಶಮಾಡಿಕೊಟ್ಟಿದ್ದಾರೆ. ಜಲ್ಲೆಯ ಜನರ ಋಣ ನನಿ ಮೇಲಿದೆ. ಏನೇ ಕೆಲಸ ಮಾಡಿದರೂ ಆ ಋಣ ತೀರಿಸಲು ಸಾಧ್ಯವಿಲ್ಲ. ಆದರೂ ಜಿಲ್ಲೆಯ ಎಲ್ಲಾ ಭಾಗಕ್ಕೂ ಭೇಟಿಕೊಟ್ಟು ನಮ್ಮಿಂದ ಆದ ಸಹಾಯ ಮಾಡಲು ಟ್ರಸ್ಟ್ ಮುಖಾಂತರ ಯುವ ಮುಖಂಡರಾದ ಪ್ರಶಾಂತ ದೇಶಪಾಂಡೆಯವರೊಂದಿಗೆ ಸೇರಿ ಪ್ರಯತ್ನಿಸುತ್ತಿದ್ದೇವೆ" ಎಂದರು.
ಯುವ ಮುಖಂಡರಾದ ಶ್ರೀ ಪ್ರಶಾಂತ್ ದೇಶಪಾಂಡೆಯವರು ಮಾತನಾಡಿ, " ನಾವು ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ಕೊರೋನ ನಿರ್ಮೂಲನೆಯಲ್ಲಿ ಕೊರತೆಯಿರುವ ಸಾಮಗ್ರಿ ಪಟ್ಟಿಮಾಡಿ, ಕುಮಟಾಕ್ಕೆ ಜಿಂಕ್ ೫೦ ಎಂಜಿ ೧೦ ಮಾತ್ರೆ, ಡೋಲೊ ೧೦ ಮಾತ್ರೆ ಹಾಗೂ ವಿಟಮಿನ್ ಸಿ ೧೦ ಮಾತ್ರೆಗಳ ಒಂದು ಮೆಡಿಕಲ್ ಕಿಟ್ ನಂತೆ ಒಟ್ಟು ೬೦೦ ಮೆಡಿಕಲ್ ಕಿಟ್, ಕುಮಟಾ ಆಸ್ಪತ್ರೆಗೆ ೨೪೦ ಓ೯೫ ಮಾಸ್ಕ ಹಾಗೂ ತಾಲೂಕಾಡಳಿತಕ್ಕೆ ೨೪೦ ಓ೯೫ ಮಾಸ್ಕ ಒಟ್ಟು ೪೮೦ ಮಾಸ್ಕಗಳು, ೧೩೫ ಉತ್ತಮ ದರ್ಜೆಯ ಪಲ್ಸ ಆಕ್ಸಿಮೀಟರ್ ಅನ್ನು ನೀಡುತ್ತಿದ್ದೇವೆ ಈ ಹಿಂದೆಯೂ ಜಿಲ್ಲೆಗೆ ಸುಮಾರು ೫೦೦೦ ಮಾಸ್ಕಗಳನ ಹಾಗೂ ಸುಮಾರು ೨೫೦೦ ಪಿಪಿಇ ಕಿಟ್ ಗಳನ್ನು ಹಸ್ತಾಂತರಿಸಿದ್ದೇವೆ. ಕರೋನ ವಾರಿಯರ್ಸ್ಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ವಿ.ದೇಶಪಾಂಡೆ, ಮಾಜಿ ಶಾಸಕಿಯರ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ, ಯುವ ಮುಖಂಡರಾದ ಪ್ರಶಾಂತ್ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ರತ್ನಾಕರ ನಾಯ್ಕ, ಹೊನ್ನಪ್ಪ ನಾಯ್ಕ, ಆರ್. ಹೆಚ್.ನಾಯ್ಕ, ಸಂತೋಷ ಶೆಟ್ಟಿ, ಸಾಯಿ ಗಾಂವಕರ್, ಕುಮಟಾ ಸಹಾಯ ಆಯುಕ್ತರು, ತಹಶೀಲ್ದಾರರು, ವೈದ್ಯಾಧಿಕಾರಿಗಳು, ಪುರಸಭೆ ಸದಸ್ಯರು, ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷರು, ವಿವಿಧ ಸೆಲ್ ಅಧ್ಯಕ್ಷರು, ಮುಖಂಡರು ಹಾಜರಿದ್ದರು.