ಕುಮಟಾ:ಪಶ್ವಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿ.ಎಂ.ಸಿ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ, ಕೊಲೆ ಹಾಗೂ ಬಿಜೆಪಿ ಕಾರ್ಯಾಲಯವನ್ನು ಧ್ವಂಸವನ್ನು ಖಂಡಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಇಂದು ರಾಜ್ಯದಾದ್ಯಂತ ಕಪ್ಪು ಪಟ್ಟಿ ಧರಿಸಿ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿ, ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಅಂತೆಯೇ ಕುಮಟಾ ಬಿಜೆಪಿ ಮಂಡಲದಿಂದ ಸಹ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬಿಜೆಪಿಯ ಹಲವಾರು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದು ಎಲ್ಲಾ ಕಾರ್ಯಕರ್ತರಿಗೆ ಗೌರವ ಪೂರ್ಣ ಶ್ರಧ್ದಾಂಜಲಿ ಸಲ್ಲಿಸಿದ ಮಾತನಾಡಿದ ಬಿಜೆಪಿಯ ಮುಖಂಡರು, ಪಶ್ವಿಮ ಬಂಗಾಳದಲ್ಲಿ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿದೆ. ಬಿಜೆಪಿಯ ಬೆಳವಣಿಗೆಯನ್ನು ಸಹಿಸದೆ ಗುಂಡಾವರ್ತನೆಯನ್ನು ಟಿ.ಎಂ.ಸಿ ಕಾರ್ಯಕರ್ತರು ನಡೆಸುತ್ತಿದ್ದಾರೆ ಇದನ್ನು ಬಿಜೆಪಿ ಖಂಡಿಸುತ್ತದೆ. ರಾಷ್ಟಾದಾಧ್ಯಂತ ಬಿಜೆಪಿ ತಾಲೂಕಾ ಮಂಡಲದಲ್ಲಿ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಹಲ್ಲೆ ನಡೆಸುತ್ತಿರುವರನ್ನು ತಕ್ಷಣ ಬಂದಿಸಬೇಕು ಮುಂದಿನ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ತಾಲೂಕ ಮಂಡಲ ಅಧ್ಯಕ್ಷರಾದ ಹೆಮಂತ ಕುಮಾರ , ಪ್ರಧಾನ ಕಾರ್ಯದರ್ಶಿ ವಿನಾಯಕ ನಾಐಕ, ಜಿ.ಐ.ಹೆಗಡೆ, ಹಿಂದೂಳಿದ ಮೊರ್ಚಾ ಅಧ್ಯಕ್ಷರಾದ ಜಗ್ಗು ಭಟ್, ಸೇರಿದಂತೆ ಇತರಿದ್ದರು.