ಭಟ್ಕಳ: ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ ಆರ್ .ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ ಅವರು ಪರಿಶೀಲನೆ ನಡೆಸಿದರು. ಚಂಡಮಾರುತ ಅವಘಡದಿಂದ ಮೃತರಾದ ಕುಟುಂಬಕ್ಕೆ ಹಾಗೂ ಹಾನಿಗೆ ಒಳಗಾದ ಪ್ರದೇಶಕ್ಕೆ ತುರ್ತು ನಿರ್ವಹಣೆಗಾಗಿ ಪರಿಹಾರ ನೀಡಿದರು.
ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸಿದ್ರೆ ಒಳ್ಳೆಯದು ಈಗಿನ ಪರಿಸ್ಥಿತಿ ನೋಡಿದ್ರೆ ಲಾಕ್ ಡೌನ್ ಮುಂದುವರಿಕೆ ಉತ್ತಮ.ಎರಡನೇ ಹಂತದ ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್ .ಅಶೋಕ್ ಹೇಳಿದ್ದಾರೆ.
ಹಳ್ಳಿ ಗಳಲ್ಲಿ ಅತೀ ಹೆಚ್ಚು ಟೆಸ್ಟಿಂಗ್ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
ಹಳ್ಳಿಗಳಲ್ಲಿ ಹೋಂ ಐಸೋಲೇಷನ್ ಇದ್ದ ಸೋಂಕಿತರಿಗೆ ಸಾಂತ್ವಾನ ಹೇಳಿ ದೈರ್ಯ ತುಂಬಲು ಈ ನಿಯಮ ಮಾಡಲಾಗಿದೆ.ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆ ಹೆಚ್ಚು ಹೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧಾರ ಮಾಡಲಾಗಿದೆ.ಮೂರನೇ ಅಲೆ ತಡೆಯಲು ಎಲ್ಲ ರೀತಿಯಲ್ಲಿ ಸರ್ಕಾರ ಸನ್ನದ್ದವಾಗಿದೆ. ಎಂದರು.