Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಆರ್.ವಿ.ದೇಶಪಾಂಡೆಯವರು ಪೂರೈಸಿರುವ ಪಿ.ಪಿ.ಇ ಕಿಟ್ ಕುಮಟಾ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ | ಎಂತ ಪರಿಸ್ಥಿತಿಯಲ್ಲೂ ವೈದ್ಯರ ಸಹಕಾರಕ್ಕೆ ತಾವಿದ್ದೇವೆ ಎಂಬ ಭರವಸೆ ನೀಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ

ಕುಮಟಾ : ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು  ಆರ್.ವಿ.ದೇಶಪಾಂಡೆ ಟ್ರಸ್ಟ್ ನಿಂದ ನೀಡಿದ್ದ 140 ಪಿಪಿಇ ಕಿಟ್ ಗಳನ್ನು
ವೈದ್ಯಾಧಿಕಾರಿಗಳ ಮೂಲಕ ತಾಲೂಕಾ ಆಸ್ಪತ್ರೆಗೆ ಹಸ್ತಾಂತರಿಸಿದರು. 


ಹೌದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಕೊರೋನ ಪ್ರಕರಣಗಳು ಹೆಚ್ಚುತ್ತಲಿದ್ದು,ಈ ಸಂಕಷ್ಟದ ಸಂದರ್ಭದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ  ಆರ್.ವಿ.ದೇಶಪಾಂಡೆ ಯವರು ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿನ ಕೊರೋನ ಸೋಂಕಿತರಿಗೆ ತಮ್ಮ ವಿ.ಆರ್. ದೇಶಪಾಂಡೆ ಟ್ರಸ್ಟ್ ಮೂಲಕ ಸಹಾಯಹಸ್ತ ಚಾಚಿದ್ದಾರೆ..


     ಇಂದು ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಸಚಿವರಾದ  ಆರ್.ವಿ.ದೇಶಪಾಂಡೆಯವರು ಪೂರೈಸಿರುವ ಸುಮಾರು 140 ಪಿಪಿಇ ಕಿಟ್ ಗಳನ್ನು ಕುಮಟಾ ಹೊನ್ನಾವರ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ವೈದ್ಯಾಧಿಕಾರಿಗಳ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಿದರು. ಕುಮಟಾ ಬ್ಲಾಕ್ ಕಾಂಗ್ರೆಸ್, ಹಾಗೂ ಕುಮಟಾ ಸಾರ್ವಜನಿಕ ಆಸ್ಪತ್ರೆಯ ಪರವಾಗಿ  ಆರ್‌ವಿ.ದೇಶಪಾಂಡೆ, ಶ್ರೀ ಪ್ರಶಾಂತ್ ದೇಶಪಾಂಡೆ ‌ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ಈ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಸೇವೆಗೆ ಅಭಿನಂದನೆ ಸಲ್ಲಿಸಿದರು. ಎಂತಹ ಪರಿಸ್ಥಿತಿಯಲ್ಲೂ ಸಹಕಾರಕ್ಕೆ ವೈದ್ಯರೊಂದಿಗೆ ತಾವಿದ್ದೇವೆ ಎಂಬ ಭರವಸೆ  ನೀಡಿದರು.


   ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ   ವಿ.ಎಲ್.ನಾಯ್ಕ, ಕುಮಟಾ ಪುರಸಭಾ ಸದಸ್ಯರಾದ  ಎಂ.ಟಿ.ನಾಯ್ಕ, ಮುಖಂಡರಾದ ವಿನು ಜಾರ್ಜ್, ಮನೋಜ ನಾಯಕ, ವಿಜಯ ವೆರ್ಣೇಕರ ಹಾಜರಿದ್ದರು....