ಹೊನ್ನಾವರ : ಒಂದು ನೀರಿನ ವಿಚಾರಕ್ಕೆ ಜಗಳ ನಡೆದು ನಂತರ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಹೊನ್ನಾವರ ತಾಲೂಕಿನ ಚಂದಾವರದಲ್ಲಿ ನಡೆದಿದೆ. ಮನೆಯ ನೀರಿನ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಯಿತು, ಅಕ್ಕ, ಪಕ್ಕದಲ್ಲಿ ಇದ್ದವರು ಜಗಳ ಬಿಡಿಸುವ ಪ್ರಯತ್ನ ಮಾಡುತ್ತಲೆ ಇದ್ದರು, ಆದರೆ ನೋಡ ನೋಡುತ್ತಲೆ ಅಬು ತಲೀಬ್ ಅನ್ನು ಚಾಕುವಿನಿಂದ ಇರಿದು ಸಾಯಿಸಲಾಗಿದೆ.
ಸಲೀನ್ ಕೋಟೆಬಾಗಿಲ್ ಎಂಬಾತ ಚಾಕುವಿನಿಂದ ಇರಿದ ದುಷ್ಕರ್ಮಿ, ಸೋಮವಾರ ಮಧ್ಯಾಹ್ನ ಇಬ್ಬರ ನಡುವೆಯೂ ನೀರಿನ ವಿಚಾರಕ್ಕೆ ಕೆಲ ಹೊತ್ತು ವಾಗ್ವಾದ ನಡೆದಿತ್ತು. ಸ್ಥಳಿಯರು ಇಬ್ಬರನ್ನು ಸಮಾಧಾನಿಸುವ ಪ್ರಯತ್ನದಲ್ಲಿದ್ದರೂ ಕೈಯಲ್ಲಿ ಚಾಕು ಹಿಡಿದಿದ್ದ ಸಲೀನ್ ನೋಡ ನೋಡುತ್ತಲೇ ಎದುರಿದ್ದವನ ಎದೆಗೆ ಬಲವಾಗಿ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ರಿಂದ ಮಾಹಿತಿ ಲಭ್ಯವಾಗಿದೆ.ಘಟನೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಈ ಬಗ್ಗೆ ಪೋಲಿಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.