ಕುಮಟಾ: ಅನಧಿಕೃತವಾಗಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಕುಮಟಾದ ಹೃದಯ ಭಾಗದಲ್ಲಿರುವ ಮಣಕಿ ಮೈದಾನದ ಪೆವಿಲಿಯನ್ ಕಟ್ಟಡದ ಹತ್ತಿರ ಅನಧಿಕೃತವಾಗಿ 440 ಗ್ರಾಂ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ
ಭಟ್ಕಳದ ಹನಿಫಾಬಾದ್ ತಲಹಾಕಾಲೋನಿಯ ಆಟೋ ಚಾಲಕನಾದ ಸೈಯದ್ ಮೂಸಾ ಎನ್ನುವವನು 23 ರ ಶುಕ್ರವಾರ ಮಧ್ಯಾಹ್ನ 2:35 ರ ಸುಮಾರಿಗೆ ಸುಮಾರು 10,000 ರೂ ಬೆಲೆ ಬಾಳುವ ಗಾಂಜಾವನ್ನು ಮಾರಾಟಾ ಮಾಡಲು ನಿಂತಿದ್ದ. ಈ ವೇಳೆ ದಾಳಿ ನಡೆಸಿದ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ 440 ಗ್ರಾಂ ಗಾಂಜಾ, ನಗದು ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.