ಕುಮಟಾ: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಆರ್.ನಾಯ್ಕ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜನಾಮೆ ನೀಡಿದ್ದರಿಂದ ತೆರವಾದ ಜಿಲಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಹಿರಿಯ ಮುಖಂಡರಾದ ಹೊನ್ನಾವರ ತಾಲೂಕಿನ ಗಣಪಯ್ಯ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜೆಡಿಎಸ್ ರಾಜ್ಯ ಮುಖಂಡರು ಮತ್ತು ವೀಕ್ಷಕರು ಹಾಗೂ ಮಾಜಿ ಶಾಸಕರಾದ ಕೋನರೆಡ್ಡಿಯವರು ಸಭೆಯಲ್ಲಿ ಘೋಷಣೆ ಮಾಡಿದರು. ಕುಮಟಾದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಈ ನಿರ್ಣಯವನ್ನು ಕೈಗೋಳ್ಳಲಾಯಿತು.
ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಗಣಪಯ್ಯ ಗೌಡ, ಶಶಿಭೂಷಣ ಹೆಗಡೆ, ಸೂರಜ್ ನಾಯ್ಕ ಸೋನಿ, ಇನಾಯಿತುಲ್ಲಾ ಶಾಬಾಂದ್ರಿ, ಆನಂದು ಗೌಡ, ಜಿ.ಎನ್.ಗೌಡ, ಭಾಸ್ಕರ ಪಟಗಾರ, ಜಿ.ಕೆ.ಪಟಗಾರ, ಸಿ.ಜಿ.ಹೆಗಡೆ, ದತ್ತಾ ಪಟಗಾರ, ಮತ್ತು ಡಿ.ಎಚ್.ಪಟಗಾರ ಮತ್ತಿತ್ತರು ಉಪಸ್ಥಿತರಿದ್ದರು