ಕುಮಟಾ:ವಾಯುಭಾರ ಕುಸಿದ ಚಂಡಮಾರುತದಿಂದ ಅನೇಕ ಅತಿವೃಷ್ಠಿ ಸಂಭವಿಸಿದೆ. ಇತ್ತ ಕುಮಟಾದ ಗೋಕರ್ಣದ ಸಮೀಪದ ಹೊಸಕಟ್ಟಾದ ರಸ್ತೆಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ರಸ್ತೆ ಹಾಳಗಾಗಿ ಹೋಗಿದೆ. ಇದರಿಂದ ಈ ಭಾಗಕ್ಕೆ ಸಂಚರಿಸಲು ರಸ್ತೆ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಈ ಭಾಗದ ಗ್ರಾಮಸ್ಥರ ಸಂಕಷ್ಟವನ್ನು ಅರಿತ ಜಿ.ಪಂ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿಯವರು ತಮ್ಮ ಸ್ವಂತ ಕರ್ಚಿನಿಂದ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣು ಕಸ ಕಲ್ಲುಗಳನ್ನು ತೆಗೆಸಿ ವಾಹನ ಓಡಾಡಲು ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಲಾಯಿತು.
ಇಲ್ಲಿ ಶಾಶ್ವತವಾಗಿ ದುರಸ್ಥಿ ಮಾಡುವಂತೆ ನಾನು ಸಂಭಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಹಾಗೂ ಜನಪ್ರತಿನಿಧಿಗಳ ಗಮಕ್ಕೆ ತರುತ್ತೇನೆ. ಸರ್ಕಾರ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡಿ ಜನರಿಗೆ ಸಂಚರಿಸಲು ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂದು ಹೇಳಿದರು.