ಕುಮಟಾ: ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರ ಶೀಘ್ರವೇ ರೋಗಿಗಳಿಗೆ ಉಪಯೋಗಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಕುಮಟಾ ಜೆಡಿಎಸ್ ತಾಲೂಕಾ ಘಟಕ ಆಗ್ರಹಿಸಿದೆ. ಈ ಬಗ್ಗೆ ಜೆಡಿಎಸ್ ತಾಲೂಕಾಧ್ಯಕ್ಷ ರಾದ ಸಿ.ಜಿ.ಹೆಗಡೆಯವರು, ಮುಖ್ಯಮಂತ್ರಿಯವರಿಗೆ ಸಹಾಯಕ ಆಯುಕ್ತ ರ ಮೂಲಕ ಮನವಿ ಸಲ್ಲಿಸಿದರು.
ಕುಮಟಾ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ರೋಗಿಗಳಿಗೆ ಅನುಕೂಲವಾಗಿದ್ದ ಡಯಾಲಿಸಿಸ್ ಕೇಂದ್ರ ಸೂಕ್ತ ನಿರ್ವಹಣೆ ಇಲ್ಲದೆ ರೋಗಿಗಳು ಉಪಯೋಗಕ್ಕೆ ಬಾರದೆ ಹಾಗೆ ಇದೆ, ಇದರಿಂದ ಜನರು ಬೇರೆ ಕಡೆ ಡಯಾಲಿಸಿಸ್ ಚಿಕಿತ್ಸೆ ಯನ್ನ ಪಡೆಯಲು ಉಡುಪಿ, ಮಂಗಳೂರು ಕಡೆ ಪ್ರಯಾಣ ಬೆಳೆಸಬೇಕಿದೆ. ಈ ಕೇಂದ್ರ ಸೂಕ್ತ ನಿರ್ವಹಣೆ ಇಲ್ಲದೆ ಇರುವುದಕ್ಕೆ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯ ವೇ ಕಾರಣವಾಗಿದೆ ಎಂದು ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಹೇಳಿದರು.
ಜೆಡಿಎಸ್ ಮುಖಂಡರಾದ ಭಾಸ್ಕರ ಪಟಗಾರ ಮಾತನಾಡಿ ಕುಮಟಾದಲ್ಲಿ ಉತ್ತಮ ರೀತಿಯಲ್ಲಿ ಡಯಾಲಿಸಿಸ್ ಘಟಕ ಕೆಲಸ ಮಾಡುತ್ತಾ ಇತ್ತು, ಈಗ ಏಕಾಏಕಿ ನಿಲ್ಲಿಸಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಪುನಃ ಆರಂಭ ಮಾಡಬೇಕೆಂದು ಹೇಳಿದರು.ಕುಮಟಾ ತಾಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ 19 ತಡೆಯಲು ಬೆಡ್ ಗಳ ವ್ಯವಸ್ಥೆ ಕಡಿಮೆ ಇದೆ ಇದನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು, ಹಳ್ಳಿಯಲ್ಲಿ ಇರುವ ಆರೋಗ್ಯ ಕೇಂದ್ರವನ್ನು ಆರೋಗ್ಯ ಘಟಕಕ್ಕೆ ಎಲ್ಲಾ ದಿನಗಳಲ್ಲಿಯೂ ವೈದ್ಯರ ಲಭ್ಯತೆ ಇಲ್ಲವಾದ್ದರಿಂದ ಜನರಿಗೆ ಸಮಸ್ಯೆ ಯಾಗುತ್ತದೆ. ಕೊವಿಡ್ 19 ನ 2ನೇ ಅಲೆ ಸಮುದಾಯಕ್ಕೆ ಹಬ್ಬಿರುವುದರಿಂದ , ಜನರು ಸಂಕಷ್ಟ ದಲ್ಲಿ ಇದ್ದಾರೆ. ಅವರಿಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಭಾಸ್ಕರ ಪಟಗಾರ, ತಾಲೂಕಾಧ್ಯಕ್ಷ ರಾದ ಸಿ.ಜಿ ಹೆಗಡೆ ಇದ್ದರು.