ಯಲ್ಲಾಪುರ: ಸಂಜೆಯ ವೇಳೆ ಮನೆಯಲ್ಲಿ ಶೇಂಗಾ ಬೀಜವನ್ನು ತಿನ್ನುತ್ತಿದ್ದ ವೇಳೆ ಪುಟ್ಟ ಮಗುವಿನ ಗಂಟಲಿನಲ್ಲಿ ಸಿಲುಕಿ ಸಾವನ್ಪಪ್ಪಿರುವ ಘಟನೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಕೂಡಲೇ ಮನೆಯವರು ಶೇಂಗಾ ಬೀಜವನ್ನು ತೆಗೆಯಲು ಹರಸಾಹಸಪಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಗಣಪತಿ ಗಲ್ಲಿಯಲ್ಲಿ ಎರಡೂವರೆ ವರ್ಷದ ಸಾತ್ವಿಕ ಮೃತಪಟ್ಟ ಪುಟ್ಟ ಮಗು.
ಗಂಟಲಿನಲ್ಲಿ 3 ಶೇಂಗಾ ಬೀಜಗಳು ಗಂಟಲಿನಲ್ಲಿ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಅಂತು ಇಂತು ಹರಸಾಹಸ ಮಾಡಿ ಮಗುವಿನ ಗಂಟಲಿನಲ್ಲಿದ್ದ ಶೇಂಗಾ ಬೀಜವನ್ನು ಹೊರತೆಗೆದಿದ್ದಾರೆ. ಈ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗು ಬದುಕಲಿಲ್ಲ.