ಕುಮಟಾ: ಕರೋನಾ ಎರಡನೆ ಅಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,ಕೋವಿಡ್ 19 ನಿಯಂತ್ರಣಕ್ಕಾಗಿ ಸರಕಾರವು ಲಾಕ್‌ಡೌನ್ ಜಾರಿಗೊಳಿಸಿದೆ.
ಆದರೆ ಜನರು ಮಾತ್ರ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕಾಣುತ್ತಿಲ್ಲ, ಅನಗತ್ಯವಾಗಿ ಸಂಚರಿಸುತ್ತ ಪಾಸಿಟಿವ್ ಹೆಚ್ಚಾಗಲು ಪರೋಕ್ಷ ವಾಗಿ ಕಾರಣರಾಗುತ್ತಿದ್ದಾರೆ. ಕುಮಟಾ, ಹೊನ್ನಾವರ ಭಾಗದಲ್ಲಿ ಅನಾವಶ್ಯಕವಾಗಿ ಒಡಾಡುತ್ತಿರುವ ಸಾರ್ವಜನಿಕರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಹಾಕಿದರು.
ಇನ್ನು ಕುಮಟಾ ತಾಲೂಕಿನಲ್ಲಿ ನೋಡುವುದಾದರೆ, ಲಾಕ್‌ಡೌನ್ ಪ್ರಾರಂಭವಾದಾಗಿನಿoದ ಇದುವರೆಗೆ ಸುಮಾರು 300 ಕ್ಕೂ ಅಧಿಕ ವಾಹನಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ 150 ಕ್ಕೂ ಅಧಿಕ ಬೈಕ್‌ಗಳನ್ನು ಸೀಜ್ ಮಾಡಿ ನಂತರ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಇತ್ತ ಹೊನ್ನಾವರ ತಾಲೂಕಿನಲ್ಲಿ ಅನಾವಶ್ಯಕ ಓಡಾಟ ನಡೆಸುತ್ತಿರುವವರ ಮೇಲೆ ಪ್ರಕರಣ ಸಹ ದಾಖಲಿಸಲಾಗಿದೆ ಎನ್ನಲಾಗಿದ್ದು, ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿದ 70 ಕ್ಕೂ ಹೆಚ್ಚು ಬೈಕ್‌ಗಳನ್ನು ಹೊನ್ನಾವರ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಲಾಕ್‌ಡೌನ್ ನಿಯಮ ಮೀರಿ ಕ್ರಿಕೆಟ್ ಆಡುತ್ತಿದ್ದ 6 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.