ಕುಮಟಾ:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ, ತೌಕ್ತೆ ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ರಕ್ಕಸ ಗ್ರಾತ್ರದ ಅಲೆಗಳು ಏಳುತ್ತಿದೆ. ಈ ಹಿನ್ನಲೆಯಲ್ಲಿ ಕುಮಟಾದ ಎಲ್ಲಡೆ ಉತ್ತಮವಾಗಿ ಮಳೆಯಾಗುತ್ತಿದೆ,
ಅರಬ್ಬಿ ಸಮುದ್ರದ ತೀರದ ಪ್ರದೇಶಗಳಾದ ವನ್ನಳ್ಳಿ, ಶಶಿಹಿತ್ತಲು, ಮೀನುಮಾರುಕಟ್ಟೆಮ ಅಳಿವೆದಂಡೆ, ಭಾಗದಲ್ಲಿ ಸಮುದ್ರದ ಅಲೆಗಳು ಹೆಚ್ಚಾಗಿದ್ದು ರಕ್ಕಸ ಗ್ರಾತ್ರದ ಅಲೆಗಳು ಜನವಸತಿ ಪ್ರದೇಶದತ್ತ ಮುನ್ನುಗುತ್ತಿರುವುದರಿಂದ ಜನತೆಗೆ ಆತಂಕ ಸೃಷ್ಟಿಸಿದೆ, ಇನ್ನು ತಗ್ಗು ಪ್ರದೇಶಗಳಲ್ಲಿ ಜನವಸತಿ ಪ್ರದೇಶಕ್ಕೂ , ಹಾಗೂ ರಸ್ತೆಯ ಅಕ್ಕ ಪಕ್ಕದ ಅಂಗಡಿಗಳಿಗೆ ನೀರುನುಗ್ಗಿದೆ ನುಗ್ಗಿದೆ. ಒಂದೆ ಕರೋನಾ ದಿಂದ ಕಂಗೆಟ್ಟ ಜನರಿಗೆ ವಾಯುಭಾರ ಕುಸಿದದಿಂದ ಸಮುದ್ರದ ಅಲೆಗಳು ಏಳುತ್ತಿದ್ದು, ರಸ್ತೆಯ ಮೇಲೆ ಹಾಗೂ ಜನ ವಸತಿ ಪ್ರದೇಶಕ್ಕೆ ನೀರುನುಗ್ಗಿ ಆಂತಕದಲ್ಲಿ ಇದ್ದ ಜನರಿಗೆ ಧ್ವನಿಯಾಗಬೇಕಾಗಿದ್ದ ಸ್ಥಳೀಯ ವಾರ್ಡ ಮೆಂಬರ್, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಮುಖಮಾಡದೆ ಇರುವುದು ಜನರಿಗೆ ಬೇಸರತಂದಿದೆ
. ಇಲ್ಲಿನ ಜನರ ಪರಿಸ್ಥಿತಿ ಏನಾಗಿದೆ ಎಂದು ವಿಚಾರಿಸಲು ಯಾರು ಭೇಟಿ ನೀಡಿಲ್ಲ, ಪೋಲಿಸ್‌ರು ಬಂದು ಹೋಗಿರುವುದು ಬಿಟ್ಟರೆ ಯಾರು ಇತ್ತ ಮುಖ ಮಾಡಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು
ಜನರ ಸಂಕಷ್ಟವನ್ನು ಅರಿತು ಕುಮಟಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ತಾಲೂಕಿನ ವನ್ನಳ್ಳಿ, ಶಶಿಹಿತ್ತಲು, ಮೀನುಮಾರಕಟ್ಟೆ, ಅಳಿವೆದಂಡೆಯ ಈ ಭಾಗಕ್ಕೆ ಭೇಟಿ ನೀಡಿ ಜನರಿಗೆ ದೈರ್ಯ ತುಂಬಿದರು, ಸ್ವತ: ತಹಶಿಲ್ದಾರರಿಗೆ ಕರೆ ಮಾಡಿ ಇಲ್ಲಿನ ಜನರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು,
ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಕೆಲವ ಕರೋನಾ ಅಂತ ನೆಪ ಮಾಡಿಕೊಂಡು ಸುಮ್ಮನೆ ಇರುವ ಬದಲು, ಸಮುದ್ರ ಅಲೆಗಳು ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗುವ ಆತಂಕದ ಇರುವ ಜನರಿಗೆ ಸ್ವಂದಿಸುವ ಕೆಲಸವಾಗಬೇಕಾಗಿದೆ ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.