ಕಾರವಾರ; ಹಿಂದೆ ಅಗತ್ಯ ವಸ್ತು ಖರೀದಿಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಒಂದೇ ವೇಳೆಗೆ ಜನರು ಅಗತ್ಯ ಕೆಲಸ ಕಾರ್ಯ ಗಳಿಗೆ ಬರುವುದರಿಂದ ಜನರ ದಟ್ಟಣೆಗೆ ಹೆಚ್ಚಾಗಲು ಕಾರಣವಾಗಿತ್ತು. ಜನದಟ್ಟಣೆ ನಿಯಂತ್ರಿಸಲು ಅಗತ್ಯ ವಸ್ತು ಖರೀದಿಗೆ ನಾಲ್ಕು ದಿನ ಅವಕಾಶ ಮಾಡಿಕೊಡಿಕೊಡುವ ಮೂಲಕ ಜಿಲ್ಲೆಯಲ್ಲಿ ಲಾಕ್ ಡೌನ್ ನಲ್ಲಿ ಮತ್ತೆ ಕೆಲವೊಂದು ಬದಲಾವಣೆ ತರಲಾಗಿದೆ.
ಈ ಸೋಮವಾರ,ಮಂಗಳವಾರ,ಬುಧವಾರ,ಗುರುವಾರ ಅಗತ್ಯ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ಇದ್ದ ಸಮಯವನ್ನು ಬೆಳಗ್ಗೆ 8 ರಿಂದ 12 ರ ವರೆಗೆ ಸಮಯವನ್ನು ವಿಸ್ತರಿಸಿದೆ. ಅನಗತ್ಯವಾಗಿ ಓಡಾಟ ಮಾಡಲು ಪಟ್ಟಣಕ್ಕೆ ಬರುವುದು ಕಂಡು ಬಂದರೆ ಅಂತಹ ವಾಹನವನ್ನು ಸಿಜ್ ಮಾಡಿಸಲಾಗುವುದು,
ಇನ್ನು ಶುಕ್ರವಾರ ,ಶನಿವಾರ,ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಅವರು ನೀಡಿದ್ದಾರೆ.