ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಚಿಟ್ಟೆಕಂಬಿ ಹಾಗೂ ಮಾಸೂರಿಗೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಈ ಭಾಗದಲ್ಲಿ ಕೋವಿಡ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇಲ್ಲಿಂದ ಜನರು ಒಂದು ಕಡೆಯಿಂದ ಇನ್ನೊಂದು ಭಾಗಕ್ಕೆ ಸಂಚರಿಸಿ ರೋಗ ಹರಡದಂತೆ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಈ ಭಾಗದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಗ್ರಾಮದಿಂದ ಹೊರಗೆ ಬರಬಾರದು ಎಂದು ಎಲ್ಲೆಡೆ ಬ್ಯಾರಿಕೇಡ್ ಹಾಕಿ, ತಾಲೂಕು ಆಡಳಿತ ಈ ಕ್ರಮಕೈಗೊಂಡಿದೆ.
ಈ ವೇಳೆ ಸ್ಥಳದಲ್ಲಿ ಕುಮಟಾ ತಹಸೀಲ್ದಾರ್, ಸಿಪಿಐ ಶಿವಪ್ರಕಾಶ ಹಾಗೂ ಪಿಎಸ್ ಐ ಆನಂದಮೂರ್ತಿ, ಮತ್ತು ಪಂಚಾಯಿತಿ ಪಿಡಿಓ, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಳದಲ್ಲಿ ಇದ್ದರು.