ಕುಮಟಾ :ಕರೋನಾ 2ನೇ ಅಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು ಜನರ ಸುರಕ್ಷತೆಗಾಗಿ ಲಾಕ್ ಡೌನ ಜಾರಿಯಲ್ಲಿದೆ. ಇದರಿಂದಾಗಿ ನಿತ್ಯವು ದುಡಿದು ಜೀವನ ನಿರ್ವಹಣೆ ಮಾಡಿ ಬದುಕು ಕಟ್ಟಿಕೊಳ್ಳುವ ಬಡವರು ಹಾಗೂ ಮಧ್ಯಮ ವರ್ಗದವರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ.
ಜನಸಾಮಾನ್ಯರ ಸಂಕಷ್ಟವನ್ನು ಅರಿತು, ವಕೀಲರಾದ ಎಂ.ಕೆ ಹೆಗಡೆ, ಆನಂದ ಹೆಗಡೆ ಹಾಗೂ ಚಾರ್ಟೆಡ್ ಅಕೌಂಟೆಂಟ್ ವಿನಾಯಕ ಹೆಗಡೆ ಇವರು ಕೂಜಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವಂತಹ ಕೂಜಳ್ಳಿ, ಕೋನಳ್ಳಿ, ಹೆಗಲೆ 3 ಗ್ರಾಮದಲ್ಲಿ ತೀರಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಗ್ರಿಗಳ ಕೀಟ್‌ಗಳನ್ನು ಕೂಜಳ್ಳಿ ಪಂಚಾಯತ ಅಧ್ಯಕ್ಷರು, ಹಾಗೂ ಪಿ.ಡಿ.ಓಗಳಿಗೆ ಹಸ್ತಾಂತರಿಸಿ ಆಯಾ ಕುಟುಂಬಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ಎಂ.ಕೆ.ಹೆಗಡೆ ಅವರು ಮಾತನಾಡಿ ನಮ್ಮ ಊರಿನಲ್ಲಿ ತೀರಾ ಆರ್ಥಿಕವಾಗಿ ಹಿಂದುಳಿದಂತಹ ಜನರನ್ನು ಗುರುತಿಸಿ ಆಹಾರ ಸಾಮಗ್ರಿಗಳ ಕೀಟ್‌ಗಳನ್ನು ನೀಡುವಂತ ಕೆಲಸ ಮಾಡಿದ್ದೇವೆ,ಯಾರಿಗಾದ್ರೂ ಆರೋಗ್ಯದ ತೊಂದರೆ ಉಂಟಾದರೆ ಸಹಾಯದ ಅಗತ್ಯವಿದ್ದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಪಂಚಾಯತ್ ಪಿಡಿಒ ಮತ್ತು ಪಂಚಾಯತ್ ಅಧ್ಯಕ್ಷ ರಾದ ಗಜಾನನ ನಾಯ್ಕ, ಸದಸ್ಯರಾದ ವೈಭವ ನಾಯ್ಕ, ರಾಮ ಗೌಡ, ಹಾಗೂ ಇತರಿದ್ದರು.