ಕುಮಟಾ: ತಾಲೂಕಿನ ಭಾರತೀಯ ಜನತಾ ಪಕ್ಷದ ವತಿಯಿಂದ ಕುಮಟಾ ಶಾಸಕ ದಿನಕರ ಶೆಟ್ಟಿಯವರು,ನಾಡುಮಾಸ್ಕೇರಿಯ ಗಂಗಾ ಮಾತಾ ದೇವಸ್ಥಾನದಲ್ಲಿ ಕರೋನಾ ಮಾರ್ಗ ಸೂಚಿಯನ್ನು ಅನುಸರಿಸಿ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕರಾದ ದಿನಕರ ಶೆಟ್ಟಿ, ಕುಮಟಾ ತಾಲ್ಲೂಕಿನಲ್ಲಿ ಒಟ್ಟು 5000 ಪುಡ್ ಕಿಟ್ ಅನ್ನು ವಿತರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು,ಪ್ರತ್ಯಕ್ಷವಾಗಿ ಎಲ್ಲ ಕಡೆ ನಮ್ಮ ಉಪಸ್ಥಿತಿ ಕಾಣದಿದ್ದರೂ, ಕಾರ್ಯಕರ್ತರು, ಮುಖಂಡ ಸಹಕಾರದಿಂದ ಜನರ ಸಂಕಷ್ಟಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೂಲಕ ಮನೆ ಮನೆಗೆ 200 ಪುಡ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ನಾಯಕ, ಜಿಲ್ಲಾ ಬಿ.ಜೆ.ಪಿ ಕೊವಿಡ್ ನಿಯಂತ್ರಣ ತಂಡದ ಅಂಬ್ಯುಲೆನ್ಸ್ ವಿಭಾಗದ ಸೇವಾ ನಿರ್ವಹಣಾ ತಂಡದ ಪ್ರಮುಖರಾದಂತ ನಾಗರಾಜ ನಾಯಕ ತೊರ್ಕೆ , ಮಂಜುನಾಥ ಜನ್ನು , ನಾಗರಾಜ ಹಿತ್ತಲಮಕ್ಕಿ, ಮಹೇಶ್ ಶೆಟ್ಟಿ, ಜಗದೀಶ್ ಅಂಬಿಗ, ಆನಂದ್ ಕವರಿ, ಉಪಸ್ಥಿತರಿದ್ದರು