Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಭಟ್ಕಳ ತಾಲೂಕಾಡಳಿತಕ್ಕೆ ಆರೋಗ್ಯ ಕಿಟ್‌ ಹಸ್ತಾಂತರಿಸಿದ ಮಾಜಿ ಸಚಿವ ಆರ್‌ ವಿ ದೇಶಪಾಂಡೆ |. ಕೋವಿಡ್ ವಾರಿಯರ್ಸ್ ಗೆ ಆತ್ಮಸ್ಥೈರ್ಯ ತುಂಬಲು ಸಹಾಯ ಹಸ್ತ

ಭಟ್ಕಳ : ಕೊರೊನಾ  ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು  ಆಡಳಿತದೊಂಧಿಗೆ ಕೈಜೋಡಿಸಬೇಕು ಹಾಗು  ಪ್ರತಿಯೊಬ್ಬರು ಕೊರೊನಾ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳುವ ಮೂಲಕ  ಎಲ್ಲರೂ ಕೊರೊನಾ ಮಹಾಮಾರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು   ಮಾಜಿ ಸಚಿವ ಆರ್‌ ವಿ ದೇಶಪಾಂಡೆ ಹೇಳಿದರು.ಅವರು ಭಟ್ಕಳ್  ತಾಲೂಕಾಡಳಿತಕ್ಕೆ  ಆರೋಗ್ಯ ಕಿಟಗಳನ್ನು ಹಸ್ತಾಂತರಿಸಿ ಮಾತನಾಡಿದರು.  
ಕೊರೊನಾ ಎನ್ನುವುದು ಇಡಿ  ವಿಶ್ವದಲ್ಲಿ  ಯಾರನ್ನು ಬಿಟ್ಟಿರುವುದಿಲ್ಲಾ .ಈ ಸಂದರ್ಬದಲ್ಲಿ ಮಾನವರಾದ ನಮ್ಮ ಕರ್ತವ್ಯ ಏನು ನಾವು ಸಮಾಜಕ್ಕೆ ಏನನ್ನು ಕೊಡಬಹುದಾಗಿದೆ ಎನ್ನುವುದು ನಾವು ಯೋಚಿಸುವ ಅಗತ್ಯ ಇದೆ. ಕೊರೊನಾ ಬಗ್ಗೆ ನಾವು ಒಗ್ಗಟ್ಟಿನಿಂದ ಹೊರಾಟವನ್ನು ನಡೆಸಬೇಕಾಗಿದೆ ಈ ಸಂದರ್ಬದಲ್ಲಿ  ನಾನು ಕಾಗ್ರೇಸ್‌ ಪಕ್ಷದ ಹೈಕಮಾಂಡ ಸೂಚನೆಯಂತೆ  ಈ ಆರೋಗ್ಯಕಿಟ್‌ ಅನ್ನು  ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕಾಡಳಿತಕ್ಕೆ ನೀಡುತ್ತಿದ್ದೆವೆ,  ಇದೊಂದು ನಾವು ಮಾಡುತ್ತಿರುವ ಅಳಿಲು ಸೇವೆ ಯಾಗಿದೆ ಎಂದು ಹೇಳಿದರು. 
ಈ ಸಂದರ್ಬದಲ್ಲಿ  ಮಾಜಿ ಶಾಸಕ ಮಂಕಾಳ ವೈದ್ಯ ಅವರು ಮಾತನಾಡಿ  ಆರ್‌. ವಿ ದೇಶಪಾಂಡೆಯವರು ಈ ಹಿಂದೆಯು ಕೂಡ ತಾಲೂಕ ಆಸ್ಪತ್ರೆಗೆ ಕೊರೊನಾ ಕೋಗಿಗಳಿಗೆ ಅವಶ್ಯಕತೆ ಇರುವ ಆರೋಗ್ಯ ಕಿಟ್ ಗಳನ್ನು ನೀಡಿದ್ದರು.  ಅವರು ತಾವೇ ಖುದ್ದಾಗಿ ಬಂದು ತಾಲೂಕಾಡಳಿತಕ್ಕೆ ಆರೋಗ್ಯ ಕಿಟ್‌ಗಳನ್ನು ಹಸ್ತಾಂತರಿಸಿದ್ದಾರೆ  ಇನ್ನು ಮುಂದಿನ ದಿನಗಳಲ್ಲಿಯು ಕೂಡಾ ಕೊರೊನಾ ರೋಗಿಗಳಿಗೆ ಯಾವುದೆ ಅವಶ್ಯಕ ವಸ್ತುಗಳಿದ್ದರು  ತಾವು ಒದಗಿಸುವ  ಭರವಸೆಯನ್ನು ನೀಡಿದ್ದಾರೆ, ಇದು ಅವರ ಸಮಾಜ ಮುಖಿಕಾರ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು 
ಈ ಸಂದರ್ಬದಲ್ಲಿ  ಪ್ರಶಾಂತ ದೇಶಪಾಂಡೆ  ಮಾತನಾಡಿ  ಇಂದು ಭಟ್ಕಳ ತಾಲೂಕಿಗೆ  700 ಮೆಡಿಕಲ್‌ ಕಿಟ್‌ , 220 ಆಕ್ಸಿಮೀಟರ್‌ , ೪೪೦ 95 ಮಾಸ್ಕಗಳನ್ನು  ನಿಡಿರುತ್ತೆವೆ ಎಂದು ಹೇಳಿದರು 

ಈ ಸಂದರ್ಭದಲ್ಲಿ ಕಾಗ್ರೇಸ್‌ ಮುಖಂಡರಾದ  ಬಿಮಣ್ಣ ನಾಯ್ಕ ಕಾಂಗ್ರೇಸ್‌ ತಾಲೂಕ ಅಧ್ಯಕ್ಷ  ಸಂತೋಷ ನಾಯ್ಕ, ಪುರಸಭಾ  ಅಧ್ಯಕ್ಷ ಪರ್ವೆಜ್‌ ಖಾಸಿಂ, ಜಾಲಿ ಪಟ್ಟಣ ಪಂಚಾಯತ್‌ ಅಬ್ದರಹಿಮ್‌, ತಾಲೂಕ ಸಹಾಯಕ ಆಯುಕ್ತೆ ಮಮತಾ ದೇವಿ, ತಾಲೂಕ ತಹಶಿಲ್ದಾರ್‌ ರವಿಚಂದ್ರ, ಹಾಗು ಇನ್ನಿತರರು ಉಪಸ್ಥಿತರಿದ್ದರು.