Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳ್ಳತನದಲ್ಲಿ ಭಾಗಿಯಾದ 8 ಆರೋಪಿಗಳ ಬಂಧನ |. ಬಂಧಿತರಿಂದ 19 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತು ವಶ


ಗೋಕರ್ಣ : ಜಿಲ್ಲೆಯ ವಿವಿಧಡೆ ನಡೆದ ಮನೆಗಳ್ಳತನ ಮತ್ತಿತರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.  ಪೊಲೀಸರು, ಬಂಧಿತರಿಂದ 19 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತು ವಶಪಡಿಸಿಕೊಂಡಿದ್ದಾರೆ. ಜನವಸತಿ ಇರದ ಮನೆಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ಜಿಲ್ಲೆಯ ವಿವಿಧೆಡೆ ಒಂದಾದ ನಂತರ ಒಂದು ಕಳ್ಳತನ ನಡೆಸುತ್ತಲೇ ಬಂದಿದ್ದ ತರುಣರ ಗ್ಯಾಂಗ್ ಒಂದನ್ನು ಬಂದಿಸಿ ಕಾನೂನಿನ ಕುಣಿಕೆ ತೊಡಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ  ವ್ಯಕ್ತವಾಗುತ್ತಿದೆ.
ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮದ ಪ್ರಶಾಂತ ಕಿಶೋರ ನಾಯ್ಕ (23)
ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (22) ಕೇಣಿಯ ರಾಹುಲ್ ಕೃಷ್ಣಾನಂದ ಬಂಟ (22) ಶಿರಕುಳಿಯ ಗಣೇಶ ಮಾರುತಿ ನಾಯ್ಕ (24), ಶಿರಸಿ ತಾಲೂಕಿನ ಕಸ್ತೂರ್ಬಾ ನಗರ ನಿವಾಸಿಗಳಾದ ಶ್ರೀಕಾಂತ ಗಣಪತಿ ದೇವಾಡಿಗ (27) ನಿಹಾಲ ಗೋಪಾಲಕೃಷ್ಣ ದೇವಳಿ (26) ಸಂದೀಪ ಹನುಮಂತ ಮರಾಠಿ (25) ಬಂಧಿತರು.


ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ನೇತ್ರತ್ವದಲ್ಲಿ ಗೋಕರ್ಣ ಪಿ. ಎಸ್.ಐ ನವೀನ್ ನಾಯ್ಕ, ಸೇರಿದಂತೆ ಕಾರವಾರ -ಅಂಕೋಲಾ ಹಾಗೂ ಗೋಕರ್ಣ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯಶಸ್ವೀ ಕಾರ್ಯಾಚರಣೆಗೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.


ಕಳೆದ ವರ್ಷದಿಂದೀಚೆಗೆ ಕಾರವಾರ -ಅಂಕೋಲಾ ಹಾಗೂ ಗೋಕರ್ಣ ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದರೂ, ಕಳ್ಳರ ಪತ್ತೆ ಕಾರ್ಯ ಇಲಾಖೆಗೆ ಸವಾ ಲ್ ಆಗಿತ್ತು. ಕೋವಿಡ್ ಮತ್ತಿತರ ಕಾರಣಗಳ ಜವಾಬ್ದಾರಿ ನಿರ್ವಹಣೆ, ಒತ್ತಡ, ಶಂಕಿತರನ್ನು ಒಮ್ಮೆಲೇ ಬಂಧಿಸಲಾಗದ ಅಸಹಾಯಕತೆ ಮತ್ತಿತರ ಕಾರಣಗಳಿಂದ ತನಿಖೆ ನಿರ್ದಿಷ್ಟ ವೇಗದಲ್ಲಿ ಸಾಗಿರಲಿಲ್ಲ ಎನ್ನಲಾಗಿದೆ.