ಕುಮಟಾ:ಮೀನು ಲಾರಿಯಲ್ಲಿ ಗೋ ಮಾಂಸ ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಕುಮಟಾ ಪಿ.ಎಸ್.ಐ ರವಿ ಗುಡ್ಡಿ ನೇತೃತ್ವದ ತಂಡ ಬಂದಿಸಿದ್ದು ಗೋ ಮಾಂಸ ಮತ್ತು ಕಳ್ಳ ಸಾಗಾಣಿಕೆಗೆ ಬಳಸಲಾದ ಲಾರಿಯನ್ನು ವಶಕ್ಕೆ ಪಡೆದ ಘಟನೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ನಡೆದಿದೆ. ಹಾವೇರಿಯ ಶಿಗ್ಗಾಂ ಬಂಕಾಪುರ ಕೊಟ್ಟಿಗೇರಿ ನೀವಾಸಿ ಚಾಲಕ ಮಹಮ್ಮದ್ ಸಾಹಿದ್ದ ಅಲ್ಲಾಪುರ (೨೯) ಅವರನ್ನು ಬಂಧಿಸಲಾಗಿದೆ.
ವಾಹನದ ಮಾಲಕರಾದ ಹುಬ್ಬಳ್ಳಿ ನಿವಾಸಿ ಅಬ್ದುಲ್ ರಶೀದ ಅಲ್ಲಾಬಕ್ಷ ಬೇಪಾರಿ ಮತ್ತು ಹಾನಗಲ್ ನಿವಾಸಿ ಕಾಶೀಪ್ ಮಸೂತಿ ಖಾನಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಈ ಆರೋಪಿಗಳು ಜಾನುವಾರಗಳನ್ನು ಎಲ್ಲಿಯೋ ವಧೆ ಮಾಡಿ ೪ ಲಕ್ಷರೂ ಮೌಲ್ಯದ ಸುಮಾರು ೩ ಟನ್ ಮಾಂಸವನ್ನು ಮೀನಿ ಲಾರಿಯಲ್ಲಿ ತಉಂಬಿಕೊಂಡು ಹಾವೇರಿಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ಲಾರಿ ಪರಿಶೀಲಿಸಿದ ಪೋಲಿಸರು ಗೋ ಮಾಂಸದ ಜೊತೆಗೆ ಚಾಲಕನನ್ನು ವಶಕ್ಕೆ ಪೆಡೆದು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ ವಶಕ್ಕೆ ಪಡೆದ ಗೋ ಮಾಂಸವನ್ನು ಉಪವಿಭಾಗಧಿಕಾರಿ ಅಜೀತ ಎಂ ಅವರ ಆದೇಶಧ ಮೇರೆಗೆ ಪುರಸಭೆಯವರು ಮಾಂಸವನ್ನು ಹೊತು ಹಾಕಿದ್ದಾರೆ ಎನ್ನಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.