Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರಿಗೆ ಸೂಚನೆ:ಶಾಸಕ ದಿನಕರ ಶೆಟ್ಟಿ


ಕುಮಟಾ: ಹೆಗಡೆ ಮುಖ್ಯ ರಸ್ತೆ ಗಣಪತಿ ದೇವಸ್ಥಾನ ದಿಂದ ಹೆಗಡೆ ಪೇಟೆ ತನಕ ಡಾಂಬರ್ ರಸ್ತೆ ನಂತರ ಹೆಗಡೆ ಪೇಟೆಯಿಂದ ದೇವಸ್ಥಾನದ ತನಕ  ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ವೀಕ್ಷಣೆ ಮಾಡಿದರು. 

ಈ ವೇಳೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರಿಗೆ ಸೂಚಿಸಿದರು.ಒಂದು ಕೋಟಿ ರೂಪಾಯಿ ಹೆಗಡೆ ರಸ್ತೆ ಗೆ ಸೆಂಕ್ಷನ್ ಮಾಡಿಸಿದ್ದು ಹೆಗಡೆ ಊರಿನ ಜನರಿಗೆ ಉತ್ತಮ ಅಗಲವಾದ ರಸ್ತೆ ನಿರ್ಮಾಣವಾಗಲಿದ್ದು ಮುಖ್ಯರಸ್ತೆಗೆ 

ಹೊಂದಿಕೊಂಡಿರುವ ಕರೆಂಟ್ ಕಂಬಗಳನ್ನು ಹಿಂದಕ್ಕೆ ಹಾಕಿ ರಸ್ತೆ ಮಾಡಲು ಅನುಕೂಲ ಮಾಡಿಕೊಡುವಂತೆ ವಿದ್ಯುಚ್ಚಕ್ತಿ ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಈ ಬಗ್ಗೆ ಅವರ ಗಮನಕ್ಕೆ ತಂದರು.


ಈ ವೇಳೆ ವಿನೋದ ಪ್ರಭು, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಯೋಗೀಶ್ ಪಟಗಾರ, ವೆಂಕಟೇಶ ನಾಯ್ಕ, ಮೋಹನ ಶಾನಭಾಗ, ಸದಸ್ಯ ರಾಜು ಮುಕ್ರಿ, ವಿವೇಕ ವೆರ್ಣೇಕರ, ಶ್ರೀಧರ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.