ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ
ಕುಮಟಾ ತಾಲೂಕಿನ ಅಳಕೋಡ ಮತ್ತು ದೀವಗಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಳಕೋಡ ಇಲ್ಲಿನ ಸಿಬ್ಬಂದಿಗಳಿಗೆ(೫೫ಕ್ಕೂ ಹೆಚ್ಚು) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಮಾಜಿ ಶಾಸಕರಾದ ಶಾರದಾ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು..
ಈ ವೇಳೆ ಮಾತನಾಡಿದ ಅವರು ದೇಶಕ್ಕೆ ದೇಶವೇ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಆಗಿದ್ದು, ನಾವೆಲ್ಲರೂ ಮನೆಯಲ್ಲಿಯೇ ಇದ್ದು ಕೊರೋನಾ ಸೋಂಕಿನ ನಿರ್ಮೂಲನೆಗೆ ಕಾಯುತ್ತಿದ್ದರೆ, ಕೆಲವು ಇಲಾಖೆಯ ಸಿಬ್ಬಂದಿಗಳು ತಮ್ಮ ಜೀವನವನ್ನೇ ಪಣಕ್ಕಿಟ್ಟು ಈ ಕೊರೋನಾ ನಿರ್ಮೂಲನೆಯಲ್ಲಿ ತೊಡಗಿದ್ದಾರೆ. ನಿಜವಾಗಿಯೂ ಅವರ ಕಾರ್ಯ ಅಭಿನಂದನಾರ್ಹವಾಗಿದೆ, ಅಂತಹವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪ್ರಮುಖರು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅವರು ನಮ್ಮ ರಕ್ಷಣೆಯಲ್ಲಿ ತೊಡಗಿರುವಾಗ, ಅವರನ್ನು ನಾವು ನೆನೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್ ನಾಯ್ಕ, ಪಂಚಾಯತ್ ಅಧ್ಯಕ್ಷರುಗಳಾದ ಕೃಷ್ಣಾನಂದ ವೆರ್ಣೇಕರ್, ಕೃಷ್ಣ ಗೌಡ, ಮುಖಂಡರುಗಳಾದ ಎಸ್. ಎಂ.ಭಟ್, ಜಗದೀಶ್ ನಾಯ್ಕ, ದತ್ತು ಭಂಡಾರಿ, ಶ್ರೀಧರ ಗೌಡ, ರೇಖಾ ಭಟ್, ರಾಜು ಅಂಬಿಗ, ಅನಿತಾ ಮಾಪಾರಿ,ಮನೋಜ ನಾಯಕ,ಗಣಪತಿ ಶೆಟ್ಟಿ, ದತ್ತು ಶೆಟ್ಟಿ, ನಿತ್ಯಾನಂದ ನಾಯ್ಕ ಮುಂತಾದವರು ಹಾಜರಿದ್ದರು...