ಕಾರವಾರ:- ಉತ್ತರ ಕನ್ನಡ ಜಿಲ್ಲೆ ಭಟ್ಕಳ ಹಾಗೂ ಕುಮಟಾ ಸೇರಿ ಎರಡು ಕರೋನಾ ಪಾಸಿಟಿವ್ ಇಂದಿನ ಬುಲಟಿನ್ ನಲ್ಲಿ ಬರುವ ಮೂಲಕ ಭಟ್ಕಳ ಹಾಗೂ ಕುಮಟಾದಲ್ಲೂ ಕಾಣಿಸಿಕೊಂಡಿದೆ.
ಇಷ್ಟುದಿನ ಜಿಲ್ಲೆಯ ಭಟ್ಕಳದಲ್ಲಿ ಕರೋನ ಪ್ರಕರಣ ಗಳು ಪತ್ತೆಯಾಗುತಿದ್ದು ಜಿಲ್ಲೆಯ ಯಾವ ಭಾಗದಲ್ಲೂ ಕಂಡುಬಂದಿಲ್ಲವಾಗಿತ್ತು. ಆದರೆ ಈಗ ಕರೋನಾ ಇದೀಗ ಕುಮಟಾದಲ್ಲಿಯೂ ಕಂಡು ಬಂದ ಹಿನ್ನಲೆ ಜನರು ಆತಂಕ ಪಡುವಂತಾಗಿದೆ.
ಮೆ 5ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ವಾಪಸ್ಸಾದ ಕುಮಟಾ ಮೂಲದ 26 ವರ್ಷದ ವ್ಯಕ್ತಿಯಲ್ಲಿ ಸೋಂಕು ಡೃಡಪಟ್ಟಿದೆ. ಈ ವ್ಯಕ್ತಿ ತಪಾಸಣೆ ಒಳಗಾಗಿ ನೇರವಾಗಿ ಒಂದು ಕುಮಟಾ ದ ಕೊಂಕಣ ಎಜುಕೇಶನ್ ಟ್ರಸ್ಟ್ ನಲ್ಲಿ ತೆರೆಯಲಾದ ಸರಕಾರಿ ಕ್ವಾರಂಟೈನನಲ್ಲಿದ್ದ, ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
ಈ ವರದಿಯಲ್ಲಿ ಕೋವಿಡ 19ಇರುವುದು ಖಚಿತವಾಗಿದೆ.
ಭಟ್ಕಳದ ಎರಡು ವರ್ಷದ ಹೆಣ್ಣು ಮಗುವಿಗೂ ಸೊಂಕು ದೃಡಪಟ್ಟಿದೆ ಎನ್ನಲಾಗಿದೆ.ಸೋಂಕಿತ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಮಗುವಿನಲ್ಲೂ ಸೋಂಕು ಡೃಡಪಟ್ಟಿದೆ ಎನ್ನಲಾಗಿದೆ.