ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಬಡಕುಟುಂಬಗಳಿಗೆ ಹೆಬ್ಬಾರ್ ರೇಷನ್ ಕಿಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ ವಿತರಿಸಿದರು
ಕೋವಿಡ್ 19 ಮಹಾಮಾರಿಯ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ,ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಕಳಚೆ, ವಜ್ರಳ್ಳಿ ಭಾಗದ ಆಶಾ ಕಾರ್ಯಕರ್ತೆಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿ ಪಂ ಸದಸ್ಯೆ ಶೃತಿ ಹೆಗಡೆ, ತಾ ಪಂ ಸದಸ್ಯ ನಟರಾಜ ಗೌಡರ್, ಸ್ಥಳೀಯ ಸಂಘಟಕ ವಿ ಎನ್ ಭಟ್ಟ ನಡಿಗೆಮನೆ, ಗ್ರಾಮ ಪಂಚಾಯತ ಅಧ್ಯಕ್ಷ ಗಜಾನನ ಭಟ್ಟ,ಉಪಾದ್ಯಕ್ಷೆ ಪಾರ್ವತಿ ಭಟ್ಟ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾಂಗೇದ್ರ ಭಟ್ಟ, ಟಿ ಎಮ್ ಎಸ್ ನ ನಿರ್ದೇಶಕ ಟಿ ಎನ್ ಭಟ್ಟ ನಡಿಗೆಮನೆ, ಸಾಮಾಜಿಕ ಕಾರ‍್ಯಕರ್ತರಾದ ಉಮೇಶ ಭಾಗ್ವತ,ಪ್ರೇಮಾನಂದ ನಾಯ್ಕ. ವನರಾಗ ಶರ್ಮಾ ಮುಂತಾದವರು ಹಾಜರಿದ್ದರು.