Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಭಟ್ಕಳದಲ್ಲಿ ನಾಳೆಯಿಂದ ಲಾಕ್ ಡೌನ್ ನಲ್ಲಿ ಸಡಿಲಿಕೆ..!

ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಳೆಯಿಂದ ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಚಟುವಟಿಕೆಗೆ ಅವಕಾಶ ನೀಡುವ ಮೂಲಕ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ. ಭಟ್ಕಳದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,


 ಕಿರಾಣಿ, ಮೆಡಿಕಲ್, ದಿನಸಿ, ಬ್ಯಾಂಕ್, ಗ್ಯಾರೇಜ್, ಸಲೂನ್, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳಿಗೆ, ಆಟೋ ಮೊಬೈಲ್, ಬಟ್ಟೆ, ಸೂಪರ್ ಮಾರ್ಕೆಟ್ ಗಳನ್ನು ಷರತ್ತುಬದ್ಧವಾಗಿ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆಟೊಗಳನ್ನು ಓಡಿಸಲೂ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.ಜೂನ್ 8ರವರೆಗೆ ಈ ಸಡಿಲಿಕೆ‌ ಜಾರಿಯಲ್ಲಿದ್ದು, ಜನರ ಓಡಾಟದ ಮೇಲೆ ನಿಗಾ ಇಡಲಾಗುತ್ತದೆ. ನಂತರ ಇನ್ನಷ್ಟು ಸಡಿಲಿಕೆಗೆ ಚಿಂತನೆ ಮಾಡಲಿದ್ದೇವೆ ಎಂದರು.


ಲಾಕ್ ಡೌನ್ ಸಡಿಲಿಕೆಯ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದ್ದು, ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಅಂಗಡಿಕಾರರ ಜವಾಬ್ದಾರಿ. ಇದಕ್ಕೆ ವಿಫಲವಾದಲ್ಲಿ ಅವರ ಅಂಗಡಿ ಪರವಾನಿಗೆ ರದ್ದಾಗಲಿದೆ ಎಂದರು