Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಎಲ್ಲರೂ ಧೈರ್ಯದಿಂದ ಕೊರೋನಾ ವಿರುದ್ಧ ಹೋರಾಡಬೇಕಾಗಿದೆ: ಸಚಿವ ಶಿವರಾಂ ಹೆಬ್ಬಾರ

ಕಾರವಾರ:  ಕ್ರಿಮ್ಸ್ ನಲ್ಲಿ ಕ್ವಾರಂಟೈನ್ ಅಲ್ಲಿ ಇರುವವರೊಂದಿಗೆ  " ವಿಡಿಯೋ ಸಂವಾದ " ನಡೆಸಿ ಆರೋಗ್ಯ ಇಲಾಖೆ ನೀಡುತ್ತಿರುವ ಸೌಕರ್ಯಗಳ ಕುರಿತು ಚರ್ಚಿಸಿ ಅವರ ಯೋಗಕ್ಷೇಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ‌ ಹೆಬ್ಬಾರ  ವಿಚಾರಿಸಿದರು.

ಜಿಲ್ಲಾಡಳಿತ ಕೋವಿಡ್ 19 ಸೋಂಕಿತ ಚಿಕಿತ್ಸೆಗೆ ಹಾಗೂ ಕ್ವಾರಂಟೈನ್ ನಲ್ಲಿರುವರ ಇರುವವರಿಗೆ ತೆಗೆದುಕೊಳ್ಳಬೇಕಾಗಿರುವ ಎಲ್ಲಾ ಮುಂಜಾಗ್ರತಾ   ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಂದಿಗ್ಧ ಸಮಯದಲ್ಲಿ ಕೊರೊನಾ ಸೋಂಕಿತರು ಹಾಗೂ ಕ್ವಾರಂಟೈನ್ ನಲ್ಲಿ ಇರುವವರು ಯಾರು ಸಹ ಭಯಪಡದೆ ಧೈರ್ಯದಿಂದ ಈ ಮಹಾಮಾರಿಯನ್ನು  ಎದುರಿಸಬೇಕಾಗಿದೆ ರಾಜ್ಯ ಸರಕಾರ, ಜಿಲ್ಲಾಡಳಿತ ಸೋಂಕಿತ ಚಿಕಿತ್ಸೆಗೆ ಎಲ್ಲಾ ರೀತಿಯಲ್ಲಿಯು ಸಹ ಸಿದ್ಧವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ ರೋಶನ್, ಜಿಲ್ಲಾ ಆರೋಗ್ಯಧಿಕಾರಿ ಡಾ.ಜಿ.ಎನ್.ಆಶೋಕ ಕುಮಾರ ಮುಂತಾದವರು ಉಪಸ್ಥಿತರಿದ್ದರು.