ಭಟ್ಕಳ : ತಾಲೂಕಿನ ಮಾವಿನಕುರ್ವ ಪಂಚಾಯತ್ ಕರಿಕಲ್, ಹಾಡವಳ್ಳಿ ಪಂಚಾಯತ್ ಹೀರೆಬೀಳು, ಗೊರ್ಟೆ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಭಟ್ಕಳ್ & ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಚೆಕ್ ವಿತರಿಸಿದರು.
ಲಾಕ್ ಡೌನ್ ಘೋಷಣೆ ಆಗುವ ಪೂರ್ವದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಕಡುಬಡವರು ಸಲ್ಲಿಸಿದ ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿದಾರರ ಅರ್ಜಿಗಳಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಮಂಜೂರದ ಚೆಕ್ ಗಳನ್ನು ಶಾಸಕ ಸುನೀಲ ನಾಯ್ಕ ಅವರು,ಲಾಕ್ ಡೌನ್ ಇರುವ ಕಾರಣ
ಫಲಾನುಭವಿಗಳು ಕಛೇರಿಗೆ ಬಂದು ಚೆಕ್ ಗಳನ್ನು ಸ್ವೀಕರಿಸಲು ಅಸಾಧ್ಯವೆಂಬುದನ್ನು ಅರಿತು, ಫಲಾನುಭವಿಗಳ ಚೆಕ್ ಗಳನ್ನು ಅವರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಹಸ್ತಾಂತರಿಸಲಾಯಿತುಇದರಿಂದಾಗಿ ಫಲಾನುಭವಿಗಳ ಕುಟುಂಬ ನಿರ್ವಹಣೆಗೆ ಕೊಂಚಮಟ್ಟಿಗೆ ಸಹಕಾರಿಯಾಗಲಿದೆ.