ಭಟ್ಕಳ: ತಾಲೂಕಿನ ಬೆಂಗ್ರೆ ಪಂಚಾಯತ್ ವ್ಯಾಪ್ತಿಯ ಪಡುಶಿರಾಲಿ ಮಜಿರೆಯಲ್ಲಿ ಸರಿ ಸುಮಾರು 30 ಮನೆಗಳಿಗೆ ಹಲವಾರು ವರ್ಷಗಳಿಂದ ಇಲ್ಲಿನ ಜನರಿಗೆ ಒಂದುಕಡೆಯಿಂದ ಇನ್ನೊಂದು ಭಾಗ ಗಳಿಗೆ ಸಂಚರಿಸಲು ರಸ್ತೆಯ ಸಂಪರ್ಕವೇ ಇಲ್ಲಾದಂತಾಗಿತ್ತು. ಈ ಬಗ್ಗೆ ಅಲ್ಲಿನ ನಿವಾಸಿಗಳು ಶಾಸಕರ ಗಮನಕ್ಕೆ ತಂದಿದ್ದು ನಿತ್ಯ ಸಂಚರಿಸಲು ಯೋಗ್ಯವಾದ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಜನರ ಸಮಸ್ಯೆ ಗೆ ಶಾಸಕ ಸುನೀಲ್ ನಾಯ್ಕ ಸ್ಪಂದಿಸಿದ್ದು ಈ
ಭಾಗಕ್ಕೆ ಸಂಪರ್ಕಿಸಲು ನೂತನ ರಸ್ತೆಯನ್ನು ನಿರ್ಮಿಸಿಕೊಡಲಾಗಿದ್ದು ಶಾಸಕ ಸುನಿಲ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಯು ಗುಣಮಟ್ಟ ನನ್ನು ಪರೀಶಿಲನೆ ನಡೆಸಿದರು.ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.