ಹೊನ್ನಾವರ: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪತ್ರಿಕಾ ವಿತರಕರು ಹಾಗೂ ಏಜೆಂಟರುಗಳಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅಗತ್ಯ ದಿನಸಿ ಕಿಟ್ ಗಳನ್ನು ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಅವರ ಮೂಲಕ ವಿತರಿಸಿದರು.
ಈ ವೇಳೆ ಹೊನ್ನಾವರ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ, ಪತ್ರಿಕಾ ವಿತರಕರು ಎಲ್ಲಾ ವ್ಯಾಪ್ತಿಗಳಿಗೂ ಹೋಗಿ ಪತ್ರಿಕೆ ಗಳನ್ನು ವಿತರಿಸುತಿದ್ದಾರೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ,
ಪೊಲೀಸ್ ಮತ್ತಿತರ ಕ್ಷೇತ್ರಗಳ ಸಿಬ್ಬಂದಿಯಂತೆ ಪತ್ರಿಕಾ ವಿತರಕರೂ ದುಡಿಯುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿಯೂ ಓದುಗರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಪತ್ರಿಕೆಗಳು ಯಶಸ್ಸು ಗಳಿಸಲು ಸಾಧ್ಯವಾಗಿದ್ದು, ಇದಕ್ಕೆ ಪತ್ರಿಕಾ ವಿತರಕರು ಮುಖ್ಯ ಕಾರಣರಾಗಿದ್ದಾರೆ. ವಿತರಕರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಅಗತ್ಯ ವಸ್ತುಗಳನ್ನು ನೀಡಿ ಮಾನಸಿಕ
ಸ್ಥೈರ್ಯ ತುಂಬುತ್ತಿದ್ದು, ಕೊರೋನಾ ಸಂಕಷ್ಟದಲ್ಲಿ ಮನೆ-ಮನ ತಲುಪಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊನ್ನಾವರ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ವಿನಾಯಕ ಶೇಟ್, ಅಜಿತ್ ತಾಂಡೆಲ್, ಸುಭಾಷ್ ಮೇಸ್ತ, ಪತ್ರಿಕಾ ವಿತರಕರಾದ ಪ್ರಶಾಂತ್ ಶೇಟ್, ನಾಗೇಂದ್ರ ಶೇಟ್, ನಾಗರಾಜ್ ಶೇಟ್, ಸದಾನಂ ಶೇಟ್, ಆದರ್ಶ, ರಾಜು ಭಂಡಾರಿ, ನಾಗರಾಜ್ ಕಡೇಕರ್, ಗೋಪಾಲ ಶೆಟ್ಟಿ, ಹಮೂ ಸಾಬ್, ಪ್ರಕಾಶ ಮೇಸ್ತ, ಗಿರೀಶ ಮೇಸ್ತ, ದೀಪಕ ನಾಯ್ಕ, ವಿನಾಯಕ ಮೇಸ್ತ, ಕಿರಣ ಶೇಟ್, ಲೋಕೇಶ್ ಸಾರಂಗ ಮುಂತಾದವರು ಹಾಜರಿದ್ದರು.