ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫, ೧೯೩೬ರಲ್ಲಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ಇಂತಹ ಕವಿ ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಬಳಲುತ್ತಿದ್ದರು. ಇದೀಗ ವಯೋ ಸಹಜ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.
ನಿಸ್ಸಾರ್ ಅಹಮದ್ ಸಾಹಿತ್ಯ ಕೃಷಿ
1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್ ಕುರಿಗಳು, ನಿತ್ಯೋತ್ಸವ ಹಾಡುಗಳನ್ನು ಕೇಳದ ಕನ್ನಡಿಗರು ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಹಾಡು ಕನ್ನಡ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಇಂಥದ್ದೊಂದು ಅಮೂಲ್ಯ ಸಾಹಿತ್ಯ ರಚಿಸಿದ ಪ್ರೊ. ಕೆಎಸ್ ನಿಸಾರ್ ಅಹ್ಮದ್ ಇನ್ನಿಲ್ಲವಾಗಿದ್ದಾರೆ. ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಮುಸ್ಲಿಮ್ ಧರ್ಮೀಯರಾದರೂ ಕನ್ನಡದ ಕೃಷಿಯಲ್ಲಿ ಮೇರುಸ್ಥಾನದಲ್ಲಿದ್ದ ನಿಸಾರ್ ಅಹ್ಮದ್ ತಮ್ಮ ಜೀವನದಲ್ಲಿ ಯಾವತ್ತೂ ವಿವಾದಕ್ಕೆ ಸಿಲುಕಿದವರಲ್ಲ.
ಕವನ ಸಂಕಲನಗಳು:
ಮನಸು ಗಾಂಧಿ ಬಜಾರು
ನೆನೆದವರ ಮನದಲ್ಲಿ
ಸುಮಹೂರ್ತ
ಸಂಜೆ ಐದರ ಮಳೆ
ನಾನೆಂಬ ಪರಕೀಯ
ಆಯ್ದ ಕವಿತೆಗಳು
ನಿತ್ಯೋತ್ಸವ
ಸ್ವಯಂ ಸೇವೆಯ ಗಿಳಿಗಳು
ಅನಾಮಿಕ ಆಂಗ್ಲರು
ಬರಿರಂತರ
ಸಮಗ್ರ ಕವಿತೆಗಳು
ನವೋಲ್ಲಾಸ
ಆಕಾಶಕ್ಕೆ ಸರಹದ್ದುಗಳಿಲ್ಲ
ಅರವತ್ತೈದರ ಐಸಿರಿ
ಮನಸು ಗಾಂಧಿ ಬಜಾರು
ನೆನೆದವರ ಮನದಲ್ಲಿ
ಸುಮಹೂರ್ತ
ಸಂಜೆ ಐದರ ಮಳೆ
ನಾನೆಂಬ ಪರಕೀಯ
ಆಯ್ದ ಕವಿತೆಗಳು
ನಿತ್ಯೋತ್ಸವ
ಸ್ವಯಂ ಸೇವೆಯ ಗಿಳಿಗಳು
ಅನಾಮಿಕ ಆಂಗ್ಲರು
ಬರಿರಂತರ
ಸಮಗ್ರ ಕವಿತೆಗಳು
ನವೋಲ್ಲಾಸ
ಆಕಾಶಕ್ಕೆ ಸರಹದ್ದುಗಳಿಲ್ಲ
ಅರವತ್ತೈದರ ಐಸಿರಿ