ಕುಮಟಾ: ಚಿತ್ರದುರ್ಗದ ಚಳ್ಳಕೆರೆಯಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಪಾದಯಾತ್ರೆಯಲ್ಲಿ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿಯವರು ಹೆಜ್ಜೆ ಹಾಕಿದರು. ಮೊದಲು ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಹಾಗೂ ಇತರ ಮುಖಂಡರ ಜೊತೆ ಕುಮಟಾ ಹೊನ್ನಾವರ ಕ್ಷೇತ್ರದಿಂದ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ರವಿಕುಮಾರ್ ಎಂ. ಶೆಟ್ಟಿಯವರು ರಾಹುಲ್ ಗಾಂಧಿಯವರ ಮೇಲಿನ ವಿಶೇಷ ಪ್ರೀತಿ ಹಾಗೂ ಗೌರವದಿಂದ ಕುಮಟಾದ ಪ್ರತಿಭೆ ಮನೋಜ್ ಗುನಗಾ ಅವರು ಚಿತ್ರಿಸಿದ ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಶಾರದಾ ಮೋಹನ್ ಶೆಟ್ಟಿಯವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಅವರು ರಾಹುಲ್ ಗಾಂಧಿಯವರಿಗೆ ಹಸ್ತಂತರಿಸಿದರು. ಈ ಭಾವಚಿತ್ರವನ್ನು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನರು, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು, ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆಯವರು, ಮಾಜಿ ರಾಜ್ಯಪಾಲರಾದ ಶ್ರೀಮತಿ ಮಾರ್ಗರೇಟ್ ಆಳ್ವ, ರಾಜ್ಯಸಭಾ.ಸದಸ್ಯರಾದ ಜಯರಾಂ ರಮೇಶ, ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಮಾಜಿ ಸಚಿವರಾದ ಹೆಚ್.ಆಂಜನೇಯ, ಕೆಪಿಸಿಸಿ ಉಪಾಧ್ಯಕ್ಷರಾದ ಐವಾನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ನಾಯಕ ಇತರ ಮುಖಂಡರು ಹಾಜರಿದ್ದ ಕಾರ್ಯಕರ್ತರು ಭಾವಚಿತ್ರವನ್ನು ಹಿಡಿದು ಸಂಭ್ರಮಿಸಿದ್ದು ವಿಶೇಷ.
ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ರವಿಕುಮಾರ್ ಎಂ ಶೆಟ್ಟಿ, ಶ್ರೀಮತಿ ಗಾಯತ್ರಿ ಗೌಡ, ಮುಜಾಫರ್ ಶೇಖ್, ಹನುಮಂತ ಪಟಗಾರ, ಶಶಿಕಾಂತ ನಾಯ್ಕ, , ಎಂ.ಟಿ.ನಾಯ್ಕ, ಕೃಷ್ಣಾನಂದ ವರ್ಣೇಕರ್, ಸಚಿನ್ ನಾಯ್ಕ, ಚಂದ್ರಹಾಸ ನಾಯಕ, ಅನಿತಾ ಮಾಪಾರಿ, ವೀಣಾ ನಾಯಕ, ಜಯಂತ ನಾಯ್ಕ, ಶಾಂತಾರಾಮ ನಾಯ್ಕ, ಸಂತೋಷ ನಾಯ್ಕ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಸೆಲ್ ಅಧ್ಯಕ್ಷರುಗಳು, ಘಟಕಾಧ್ಯಕ್ಷರುಗಳು, ಮಾಜಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್ ಮತ್ತು ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು- ಸದಸ್ಯರುಗಳು, ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.