ಕುಮಟಾ: ಸುಲಭ ಸೇವಾ ಸಂಸ್ಥೆ ಕುಮಟಾ ಕಛೇರಿಯಲ್ಲಿ ಗಾಂಧಿಜಯಂತಿ ಅಂಗವಾಗಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರಾದ ದಿವಾಕರ ಅಘನಾಶಿನಿ ಖಾದಿ ಸೀರೆ ವಿತರಿಸಿ " ಮಾತನಾಡಿದ ಅವರು, ಮಹಿಳೆಯರ ಪರಿಶ್ರಮ ಯಾವತ್ತೂ ವ್ಯರ್ಥ ವಾಗಲಾರದು. ನಿಮ್ಮ ಜೀವನ ಶೈಲಿ ಹಲವರಿಗೆ ಸ್ಪೂರ್ತಿಯಾಗಿದೆ ಎಂದರು.
ಸುಲಭ ಸೇವಾ ಸಂಸ್ಥೆ ಮಾರ್ಗದರ್ಶನಲ್ಲಿ ರಚನೆಯಾದ ಶ್ರೀ ಮಲ್ಲಿಕಾರ್ಜುನ ಮಹಿಳೆಯರ ಜಂಟಿ ಭಾಧ್ಯತಾ ಗುಂಪು ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ದಿಂದ ಸಾಲ ಸೌಲಭ್ಯ ಪಡೆದು ಸ್ವಉಧ್ಯೋಗ ಮಾಡಿ ಕುಟುಂಬಕ್ಕೆ ಆಧಾರವಾಗಿದೆ, ಇದನ್ನ ಮನಗಂಡ ಸುಲಭ ಸೇವಾ ಸಂಸ್ಥೆಯು ಶ್ರೀ ಮಲ್ಲಿಕಾರ್ಜುನ ಸಂಘದ ಮಹಿಳೆಯರಿಗೆ ಗಾಂಧಿಜಯಂತಿ ಪ್ರಯುಕ್ತ ಖಾದಿ ಸೀರೆಯನ್ನ ನೀಡುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ವ್ಯವಸ್ಥಾಪಕರಾದ ಪ್ರೀತಿ ಗೌಡ. ಚೇತನ್ ಆಚಾರಿ. ಸುಲಭ ಸಹಾಯಕ ವಿದ್ಯಾ ಭಂಡಾರಿ ಉಪಸ್ಥಿತರಿದ್ದರು.