Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮಕ್ಕಳಲ್ಲಿನ ಸೂಪ್ತ ಪ್ರತಿಭೆಗಳು ಅನಾವರಣಗೊಳ್ಳಲಿ:ನಿಕಟಪೂರ್ವ ತಾ.ಪಂ ಸದಸ್ಯ ಜಗನ್ನಾಥ ನಾಯ್ಕ

ಕುಮಟಾ: ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಕವಿತ್ವವನ್ನು ಹೊರ ಜಗತ್ತಿಗೆ ಅನಾವರಣಗೊಳಿಸಲು ಪ್ರಯತ್ನಿಸುತ್ತಿರುವ ಕುಮಟಾ ಕನ್ನಡ ಸಂಘದ ಕಾರ್ಯ ಶ್ಲಾಘನೀಯ ಎಂದು ನಿಕಟಪೂರ್ವ ತಾ.ಪಂ ಸದಸ್ಯ ಜಗನ್ನಾಥ ನಾಯ್ಕ ಹೇಳಿದರು.

ತಾಲೂಕಿನ ಜನತಾ ವಿದ್ಯಾಲಯ ಬಾಡ ಕಾಗಾಲದಲ್ಲಿ  ಕುಮಟಾ ಕನ್ನಡ ಸಂಘದಿಂದ ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “ಬಾಪು ಸದ್ಬಾವನಾ ಸ್ವರಚಿತ ಕವನ ವಾಚನ ಸ್ಪರ್ಧೆ, ಉದಯೋನ್ಮುಖ ಕವಿ ಪುರಸ್ಕಾರ ಪ್ರದಾನ”ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪಠ್ಯೇತರ,ಚಟುವಟಿಗೆಗಳು,ಕಡಿಮೆಯಾಗುತ್ತಿದೆ.ಕನ್ನಡಪರ ಸಂಘಟನೆಗಳು ರಸ್ತೆ ರಿಪೇರಿ, ಟೋಲ ನಾಕಾ ಅವ್ಯವಸ್ಥೆ ಇನ್ನಿತರ ಸಮಸ್ಯೆಗಳ ಕುರಿತು
ರಸ್ತೆಗಿಳಿದು ಹೋರಾಟಕ್ಕೆ ಮುಂದಾಗಬಾರದು.ಇದನ್ನು ರಾಜಕಾರಣಿಗಳು,ಅಧಿಕಾರಿಗಳು ಇನ್ನಿತರ ಸಂಘಟನೆಗಳು ನೋಡಿಕೊಳ್ಳುತ್ತವೆ. ಆದರೆ ಕನ್ನಡ ಪರ ಸಂಘಟನೆಗಳು ಕೇವಲ ಕನ್ನಡ ಭಾಷೆಯ ಅಭಿವೃಧ್ಧಿಯತ್ತ ಗಮನ ಹರಿಸಲಿ. ಈ ದಿ
ಶೆಯಲ್ಲಿ ಕುಮಟಾ ಕನ್ನಡ ಸಂಘ ಕಳೆದ ಎಂಟು ತಿಂಗಳಿನಿಂದ ನಾಡು,ನುಡಿ,ಭಾಷೆಯ ಕುರಿತು ಹಲವಾರು ಕಾರ್ಯಕ್ರಮ ಮಾಡುತ್ತಿರುವುದು ಸ್ತುತ್ಯಾರ್ಯ.ಇಂತಹ ಜನಪರ ಕಾರ್ಯಕ್ರಮಗಳು ಕನ್ನಡ ಸಂಘದಿಂದ ನಿರಂತರವಾಗಿ
ನಡೆಯುತ್ತಿರಲಿ ಎಂದು ಆಶಿಸಿದರು.

ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ ನಮ್ಮ ಸಂಘ ಅಲ್ಪಾವಧಿಯಲ್ಲಿ ರಾಜ್ಯ ಮಟ್ಟದಲ್ಲಿ ಮನೆ
ಮಾತಾಗಲು ನಿರಂತರವಾಗಿ ಕಾರ್ಯಕ್ರಮ ನಡೆಸುತ್ತಿರುವುದೇ ಕಾರಣವಾಗಿದೆ. ನಮ್ಮ ಈ ಕಾರ್ಯ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿ
ನಗಳಲ್ಲಿ ಪ್ರತಿ ಮನೆ,ಮನೆಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಪ್ಯತ್ನಿಸಲಾಗುವುದು.ಬಾಪು ಸದ್ಬಾವನಾ ಸ್ವರಚಿತ
ಕವನ ವಾಚನ ಸ್ಫರ್ಧೆ ಆಯೋಜಿಸುವ ಮೂಲಕ ಮಕ್ಕಳಲ್ಲಿರುವ ಕವಿತ್ವವನ್ನು ಹೋರ ಹಾಕಿದ ಆತ್ಮ ತೃಪ್ತಿ ನಮಗಿದೆ.
“ಉದಯೋನ್ಮುಖ ಕವಿ” ಪುರಸ್ಕಾರ ಪಡೆದ ಬಾಲ ಪ್ರತಿಭೆಯಂತೆ ಎಲ್ಲರೂ ಪ್ರಯತ್ನ ಪಟ್ಟಾಗ ನಾವು ಮಾಡಿದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಸಂಘದ ಸದಸ್ಯರು ಸಹಕಾರ ನೀಡಬೇಕು ಎಂದರು.

ಮುಖ್ಯೋಧ್ಯಾಪಕಿ ಶ್ರೀಮತಿ ವೀಣಾ ಮಾಳಿಗೇರ ಮಾತನಾಡಿ ಕುಮಟಾ ಕನ್ನಡ ಸಂಘ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಹಾಗೂ ಭಾಷಾಭಿಮಾನ ರೂಢಿಸಿಕೊಳ್ಳಲು ಪ್ರೇರೆಪಿಸುತ್ತದೆ. ಕನ್ನಡದ ಕಾರ್ಯಕ್ರಮಗಳಿಗೆ ನಮ್ಮ ಶಾಲೆಯ ವೇಧಿಕೆ ಯಾವಾಗಲೂ ಮುಕ್ತವಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ಕುಮಟಾ ಕನ್ನಡ ಸಂಘದಿಂದ ನಿರಂತರ ನಡೆಯುತ್ತಿರಲಿ ಎಂದರು.
ಈ ಸಂದರ್ಭದಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ತಮ್ಮ ಕಾಲೇಜಿನಲ್ಲಿ ವೇಧಿಕೆ ಒದಗಿಸುವುದರೊಂದಿಗೆ ಮಕ್ಕಳನ್ನು ಕನ್ನಡ ಪರ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತಿರುವ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ
ಪ್ರಾಚಾರ್ಯ ಶ್ರೀ ಶ್ರೀನಿವಾಸ ಶೇಣ್ವಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್.ಜಿ.ಹೆಗಡೆಯವರನ್ನು ಆತ್ಮೀಯವಾಗಿ
ಸನ್ಮಾನಿಸಲಾಯಿತು.
ಬಾಪು ಸದ್ಬಾವನಾ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜನತಾ
ವಿದ್ಯಾಲಯ ಬಾಡ-ಕಾಗಾಲದ ವಿಧ್ಯಾರ್ಥಿನಿ ಸ್ಪೂರ್ತಿ ಪಟಗಾರ ಪ್ರಥಮ ಸ್ಥಾನ ಪಡೆದು ಉದಯೋನ್ಮುಖ ಕವಿ ಪ್ರಶಸ್ತಿಗೆ
ಭಾಜನಳಾಗಿದ್ದಾಳೆ. ಅಘನಾಶಿನಿ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿ ಕುಮಾರಿ ರಾಜಶ್ರೀ ಗೌಡ ದ್ವಿತಿಯ ಸ್ಥಾನ ಹಾಗೂ ಜನತಾ ವಿಧ್ಯಾಲಯ
ಬಾಡ,ಕಾಗಾಲದ ವಿಧ್ಯಾರ್ಥಿನಿ ಗಾಯತ್ರಿ ರಾಜು ಮಡಿವಾಳ ತೃತೀಯ ಸ್ಥಾನ ಪಡೆದಿರುತ್ತಾಳೆ.
ಕಾರ್ಯಕ್ರಮದಲ್ಲಿ ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷರಾದ ಉದಯ ಭಟ್ಟ, ಬಾಬು ನಾಯ್ಕ, ಖಜಾಂಚಿ ಶಿವಯ್ಯ ಹರಿಕಾಂತ,
ಮಾಧ್ಯಮ ಸಲಹೆಗಾರ ಸಂತೋಷ ನಾಯ್ಕ, ಸದಸ್ಯರಾದ ಜಿ.ಎಲ್.ನಾಯ್ಕ, ನರೇಶ ನಾಗೇಕರ್,ಕುಮಾರ ಕವರಿ,ಯೋಗೇಶ್ವರ
ನಾಯ್ಕ, ಕವಿಯಿತ್ರಿ ಶುಭಾ ವಿಷ್ಣು ಸಭಾಹಿತ ಇನ್ನಿತರರು ಇದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಂದ್ರ ಭಟ್ಟ ಸೂರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯದರ್ಶಿ
ದಯಾನಂದ ಭಂಡಾರಿ ಸ್ವಾಗತಿಸಿದರು.ಸದಸ್ಯ ಆರ್.ಎನ್.ಹೆಗಡೆ ಆಶಯ ನುಡಿಗಳನ್ನಾಡಿದರು. ಶಿಕ್ಷಕ ನಾರಾಯಣ ಬಳ್ಗು
ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಜು ಶೇಟ್ ವಂದಿಸಿದರು.