ಭಟ್ಕಳ: ಯಕ್ಷಗಾನ ವೇಷ ತೊಟ್ಟ ಸಚಿವ ಡಾ. ಕೆ ಸುಧಾಕರ್ ಗಮನಸೆಳೆದರು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೂಕ್ತ ಜಾಗ ಪರಿಶೀಲನೆಗೆ ಹಾಗೂ ಇಲಾಖೆಯ ಇತರ ಕಾರ್ಯದ ನಿಮಿತ್ತ ಆಗಮಿಸಿದ ಸಚಿವರು,ಭಟ್ಕಳ ಸರ್ಕಾರಿ ಆಸ್ಪತ್ರೆ ಭೇಟಿ ಹಾಗೂ ಪರಿಶೀಲನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಆಗಮಿಸಿದ್ದ ಸುಧಾಕರ್, ತಡರಾತ್ರಿ ಯಕ್ಷಗಾನ ನೋಡಲು ಆಗಮಿಸಿದ್ದರು.
ಯಕ್ಷಗಾನದ ಪ್ರಸಂಗವನ್ನು ವೀಕ್ಷಿಸಿದ ಸಚಿವರು, ಬಳಿಕ ಯಕ್ಷಗಾನದ ವೇಷಧಾರಿಯಾಗಲು ಸಮ್ಮತಿಸಿದರು.ನಂತರ ವೇಷ ಭೂಷಣ ಧರಿಸಿ ಕೀಲಿಕೈ ತೊಟ್ಟು ವೇದಿಕೆಗೆ ಬಂದಾಗ ಚಪ್ಪಾಳೆ ಸುರಿಮಳೆ ಆಯಿತು.
ಉತ್ತರ ಕನ್ನಡ ಜಿಲ್ಲೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಾಗೂ ಭಟ್ಕಳದ ಶಾಸಕ ಸುನೀಲ್ ನಾಯ್ಕ ಜೊತೆ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಸಚಿವರು ಯಕ್ಷಗಾನ ವೇಷ ತೊಟ್ಟು ಸಂತಸ ಪಟ್ಟದರು.