Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಈಗಿನ ಬಿಜೆಪಿ ಶಾಸಕರುಗಳು ಮೇಸ್ತಾ ಸಾವಿನ ಫಲಾನುಭವಿಗಳು : ಕೆ.ಪಿ.ಸಿ.ಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ವಾಗ್ದಾಳಿ

ಹೊನ್ನಾವರ: ಪರೇಶ ಮೇಸ್ತಾ ಸಾವಿನ ಫಲಾನುಭವಿಗಳು ಈಗಿನ ಜಿಲ್ಲೆಯ ಬಿಜೆಪಿ ಶಾಸಕರು ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ವಾಗ್ದಾಳಿ ನಡೆಸಿದರು. ಅವರು ಪಟ್ಟಣದ ಶರಾವತಿ ಸರ್ಕಲ್ ಆಯೋಜಿಸಿದ್ದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು. ಪರೇಶ ಮೆಸ್ತಾ ಸಾವಿನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಆಯ್ಕೆಯಾದ ಬಿಜೆಪಿ ಶಾಸಕರು ಷಂಡರಂತೆ ತೋರಿದ್ದಾರೆ. 

ಘಟನೆಯ ಕುರಿತು ಅಂದು ಅಬ್ಬರಿಸಿ ಬೊಬ್ಬೆರಿದಿದ್ದ ಸಂಸದರಾದ ಅನಂತಕುಮಾರ ಹೆಗಡೆ, ಶೋಭಾ ಕರಂಲ್ಲಾಜೆ, ಇವಾಗ ಎಲ್ಲಿ ಎಂದು ಪ್ರಶ್ನಿಸಿದರು. ಪರೇಶ ಮೇಸ್ತ ನಿಧನ ದುಃಖ ತಂದಿದೆ. ಅವರ ಸಾವಿನ ಮೇಲಿನ ರಾಜಕೀಯ ಸಭೆ ಇದಲ್ಲ. ಅಂದು ಬಿಜೆಪಿಯವರ ಆರೋಪದ ಬಗ್ಗೆ ಜಾಗೃತಿ ಸಭೆ ಇದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ಪರೇಶ ಮೇಸ್ತಾ ಸಹಜ ಸಾವು ಎಂದು ಸಿಬಿಐ ವರದಿ ಸಲ್ಲಿಸಿದೆ. ಈ ಹಿಂದೆ ಬಿಜೆಪಿಯವರು ಗೊಂದಲದ ವಾತಾವರಣ ಸೃಷ್ಠಿಸಿದ್ದಾರೆ. ನೊಂದ ಕುಟುಂಬದವರ ನೋವು ಯಾರಿಗೂ ಬೇಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೋಮು ಭಾವನೆಯ ಕಿಚ್ಚು ಹಬ್ಬಿಸಿ ಹೆಣದ ಮೇಲೆ ಮತ ಪಡೆದಿದ್ದಾರೆ. ನಾಲ್ಕು ಜನ ಶಾಸಕರು ನೈತಿಕತೆಯ ಮೇಲೆ ರಾಜೀನಾಮೆ ನೀಡಲಿ. ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದಾರೆ. ಮುಂದೆಯೂ ಈ ಬಗ್ಗೆ ಜಿಲ್ಲೆಯಲ್ಲೆಡೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.


ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ ಹನಿ ಹನಿ ರಕ್ತಕ್ಕೂ ನ್ಯಾಯ ಕೋಡುತ್ತೇನೆ ಎಂದು ಗುಡುಗಿದ ಸಂಸದರು ಇದ್ದಾರೋ ಇಲ್ಲವೋ ಗೋತ್ತಿಲ್ಲ. ಅಮಾಯಕ ಹಿಂದು ಹುಡುಗರನ್ನು ಕೋಮು ಪ್ರಚೋದನೆಯ ಮೂಲಕ ಜೈಲು ಸೇರಿಸಿದರು. ಕಿಚ್ಚು ಹಚ್ಚಿದವರು ನ್ಯಾಯ ಕೊಡುತ್ತಿಲ್ಲ. ಆ ಕುಟುಂಬಕ್ಕೆ ಈಗಲಾದರೂ ಆರ್ಥಿಕವಾಗಿ ಸಹಕರಿಸಿ ಬಿಜೆಪಿಯವರು ಕುಟುಂಬದವರಿಗೆ ಧಮ್ಕಿ ಹಾಕುವ ಮೂಲಕ ಅವರಿಂದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಇದಕ್ಕೆ ಕ್ಷಮೆ ಕೇಳಬೇಕು ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ಸತೀಶ ಶೈಲ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ಮಂಜುನಾಥ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಹಾಗೂ ಕಾರ್ಯಕರ್ತರಿದ್ದರು