ಕುಮಟಾ: ಪಟ್ಟಣದ ಗಾಂಧಿಚೌಕದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಅವರು ದೀಪ ಬೆಳಗಿಸಿದರು. ಪಕ್ಷದ ಮುಖಂಡರು ಮಹಾನ್ ಚೇತನರಿಗೆ ಪುಷ್ಪ ನಮನ ಸಲ್ಲಿಸಿದರು.
ಸಂದರ್ಭದಲ್ಲಿ ಪವರ್ ಲಿಪ್ಟಿಂಗ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೇ ಹೆಸರು ಮಾಡಿರುವ ಕುಮಟಾದ ಪ್ರತಿಭೆ ವೆಂಕಟ್ರಮಣ ನಾರಾಯಣ ಪ್ರಭು ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.
ಶಾರದಾ ಶೆಟ್ಟಿ ಮಾತನಾಡಿ," ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನದ ವಿಶೇಷ ನಮ್ಮ ಕುಮಟಾದ ಪ್ರತಿಭೆಯಾದ ವೆಂಕಟೇಶ ನಾರಾಯಣ ಪ್ರಭು ಅವರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಅವರು ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳನ್ನು ಪಡೆದುಕೊಂಡು ಕುಮಟಾದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅಲ್ಲದೇ ಮುಂದಿನ ತಿಂಗಳು ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಪವರ್ ಲಿಫ್ಟಿಂಗ್ ಕಾಮನ್ವೆಲ್ತ್ ಗೇಮ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ, ಅಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಳ್ಳಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಪ್ಪ ನಾಯಕ , ಎಂ.ಟಿ.ನಾಯ್ಕ, ಮಾಜಿ ಜಿ.ಪಂ ಸದಸ್ಯರಾದ ಪ್ರದೀಪ್ ನಾಯಕ, ಭಾಸ್ಕರ್ ಪಟಗಾರ, ಹನುಮಂತ ಪಟಗಾರ, ಮುಜಾಫರ್ ಶೇಖ್, ವಿನಯಾ ಜಾರ್ಜ್, ಲಕ್ಷ್ಮಿ ಚಂದಾವರ್ಕರ್, ಮನೋಜ ನಾಯಕ, ಸಂತೋಷ ನಾಯ್ಕ, ವೀಣಾ ನಾಯಕ, ಅನಿತಾ ಮಾಪಾರಿ, ಅನಂತ ನಾಯ್ಕ, ಗೀತಾ ಭಂಡಾರ್ಕರ್, ಅಕ್ಷಯ ನಾಯ್ಕ, ವಿನು ಜಾರ್ಜ್, ರಾಜೇಶ್ ಪ್ರಭು, ವಿಜಯ್ ವೆರ್ಣೇಕರ್ , ನೀಲಕಂಠ ನಾಯ್ಕ, ರಾಜು ಆಚಾರ್ಯ ಮುಂತಾದವರು ಹಾಜರಿದ್ದರು.