ಕುಮಟಾ: ಪ್ರಧಾನಿ ನರೇಂದ್ರ ಮೋದಿ ಅವರ 73 ನೇಯ ಜನ್ಮ ದಿನಾಚರಣೆಯ ಅಂಗವಾಗಿ ಸೇವಾ ಪಾಕ್ಷಿಕದ ಕಾರ್ಯಕ್ರಮದಂದು ಹಮ್ಮಿಕೊಂಡ ಖಾದಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಖಾದಿ ವಸ್ತುಗಳನ್ನು ಖರೀದಿಸಿದರು.
ಕುಮಟಾ ಬಿಜಪಿ ಮಂಡಲದಿಂದ ಏರ್ಪಡಿಸಿದ ಖಾದಿ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತಕ್ಕೆ ನಾವೆಲ್ಲರೂ ಕೈಜೋಡಿಸಿ ಸ್ವದೇಶಿ ವಸ್ತುಗಳನ್ನು ಹೆಚ್ಚು ಖರೀಧಿಸಬೇಕು ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಮಂಡಲಾಧ್ಯಕ್ಷರಾದ ಹೇಮಂತ ಕುಮಾರ ಗಾಂವಕರ, ಮುಖಂಡರಾದ ನಾಗರಾಜ ನಾಯಕ ತೊರ್ಕೆ, ಪ್ರಶಾಂತ ನಾಯ್ಕ, ಗಜಾನನ ಗುನಗಾ, ಹರಿಹರ ನಾಯ್ಕ ವನಳ್ಳಿ, ಇತರಿದ್ದರು.