ಕುಮಟಾ; ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವಾಗ ತರಭೇತಿ ಹಾಗೂ ಪ್ರೋತ್ಸಾಹ ಅಗತ್ಯ ಎಂದು ನಿಕಟಪೂರ್ವ ಹೆಗಡೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ ಹೇಳಿದರು.
ತಾಲೂಕಿನ ಮಾಸೂರು-ಲುಕ್ಕೇರಿ ಬಬ್ರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕುಮಾರಿ ನಾಗರತ್ನ ಗೌಡಳನ್ನು ಗೌರವಿಸಿ ಮಾತನಾಡಿದರು.
ತೀರ ಹಿಂದುಳಿದ ಮಾಸೂರು ಕುಗ್ರಾಮದಲ್ಲಿ ಓದುತ್ತಿರುವ ನಮ್ಮೂರಿನ ಪ್ರತಿಭೆ ನಾಗರತ್ನ ಗೌಡ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಅವಳಿಗೆ ಬೆಂಗಳೂರಿನಲ್ಲಿ ತರಭೇತಿ ನೀಡುವುದರ ಜೊತೆಯಲ್ಲಿ ಅವಳ ಕ್ರೀಢಾ ಸಾಧನೆಗೆ ತಗಲುವ ಎಲ್ಲಾ ವೆಚ್ಚವನ್ನು ತಾವೇ ಭರಿಸುವುದಾಗಿ ಅವರು ಭರವಸೆ ನೀಡಿದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ ತೀರಾ ಹಿಂದುಳಿದ ಮಾಸೂರು ಗ್ರಾಮದಲ್ಲಿ ಕ್ರೀಢಾ ಪರಿಕರಗಳ ಕೊರತೆಯಲ್ಲೂ ಕುಮಾರಿ ನಾಗರತ್ನ ಗೌಡರವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ.
ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರ ಕ್ರೀಢಾ ಪರಿಕರಗಳನ್ನು ಒದಗಿಸುವುದರ ಜೊತೆಯಲ್ಲಿ ಉತ್ತಮ ಸೌಕರ್ಯವುಳ್ಳ ಕ್ರೀಢಾಂಗಣ ಹಾಗೂ ಅದಕ್ಕೆ ಪೂರಕವಾದ ಪರಿಕರಗಳನ್ನು ಒದಗಿಸುವ ಕಾರ್ಯವಾಗಬೇಕು. ನಾಗರತ್ನ ಗೌಡಳು ರಾಜ್ಯಮಟ್ಟದಲ್ಲೂ ವಿಜಯಶಾಲಿಯಾಗಿ ಬಂದರೆ ಕುಮಟಾ ಕನ್ನಡ ಸಂಘದಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮ ಎರ್ಪಡಿಸಿ ಅಭಿನಂದಿಸಲಾಗುವುದು ಎಂದರು.
ನಿವೃತ್ತ ಮುಖ್ಯೋದ್ಯಾಪಕ ಶ್ರೀ ಎಚ್.ಎಚ್.ಪಟಗಾರ ಮಾತನಾಡಿ ಗಾಂಧಿಜೀಯವರ ತ್ವತಾದರ್ಶಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾದರಿ ನಾಗರಿಕರಾಗಲು ಇಂದಿನಿಂದಲೇ ಪ್ರಯತ್ನಶೀಲರಾಗಬೇಕು. ನಮ್ಮೂರಿನ
ಕ್ರೀಢಾ ಪ್ರತಿಭೆ ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿರುವುದು ನಮ್ಮ ಶಾಲೆಗೆ ಹೆಮ್ಮೆ. ಅವಳಿಗೆ ಸೂಕ್ತ ಸಮಯದಲ್ಲಿ
ಮಾರ್ಗದರ್ಶನ ನೀಡಿ ಉನ್ನತ ಮಟ್ಟಕ್ಕೇರಿಸಲು ಸಹಕರಿಸಿದ ಶಿಕ್ಷಕ ವೃಂದ ಅಭಿನಂದನಾರ್ಹರು ಎಂದರು.
ಮುಖ್ಯ ಶಿಕ್ಷಕ ಶಿವಾ ನಾಯ್ಕ,ಎಸ್.ಎ.ಪಟಗಾರ,ಶಿಕ್ಷಕರಾದ,ದರ್ಶನ ಗಾವಡಿ,ಮೋಹನ ಪಟಗಾರ,ವಿದ್ಯಾ ಪಟಗಾರ, ಇಂದಿರಾ ಪಟಗಾರ,ರಾಜೇಶ್ವರಿ
ಪಟಗಾರ ಇನ್ನಿತರರು ಇದ್ದರು.
ಶಿಕ್ಷಕಿ ಶ್ರೀಮತಿ ವೃಂದಾ ಪಟಗಾರ ನಿರೂಪಿಸಿದರು, ದೈಹಿಕ ಶಿಕ್ಷಕ ಗಣಪತಿ ಪಟಗಾರ ವಂದಿಸಿದರು.