ಅವರ ಸ್ಥಾನಕ್ಕೆ ಬೆಂಗಳೂರಿನ ಇಂಟಲಿಜೆನ್ಸ್‌ನಲ್ಲಿ ಎಸ್.ಪಿಯಾಗಿ ಕೆಲಸ ಮಾಡುತ್ತಿದ್ದ ಎನ್ ವಿಷ್ಣುವರ್ಧನ್ ( ಐ.ಪಿ.ಎಸ್ ) ಅವರನ್ನು ನೇಮಕ ಮಾಡಲಾಗಿದೆ. ವಿಷ್ಣುವರ್ಧನ ರವರು ಈ ಹಿಂದೆ ನಮ್ಮ ನೆರೆಯ ಜಿಲ್ಲೆಯ ಉಡುಪಿಯಲ್ಲಿ ಕೆಲಸ ನಿರ್ವಹಿಸಿದರು. ಕಳೆದ ಕೆಲ ತಿಂಗಳ ಹಿಂದೆ ಎಸ್ಪಿ ವರ್ಗಾವಣೆ ಸಂಬಂದ ಕುರಿತು ಆಗಾಗ ಸುದ್ದಿಯಾಗುತ್ತಿತ್ತು.
ಜಿಲ್ಲೆಯ ಕೆಲ ಶಾಸಕರು, ತಮ್ಮ ರಾಜಕೀಯ ಪ್ರಭಾವ ಬೀರಿ, ಮುಖ್ಯಮಂತ್ರಿಗಳು ವರ್ಗಾವಣೆಗೆ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಪಟ್ಟಿ ಬಂದಾಗ ಸುಮನ್ ಹೆಸರಿರಲಿಲ್ಲ ಅದಕ್ಕೆ ಮತ್ತೊಮ್ಮೆ ಶಾಸಕರು ಸಿ.ಎಂ ಭೇಟಿ ಮಾಡಿ ವರ್ಗಾವಣೆಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ.