Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಅದ್ದೂರಿಯಾಗಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಸಿದ್ದಾಪುರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ  ಶಾಲಾ ವಾರ್ಷಿಕೋತ್ಸವ  ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ  ನಿವೃತ್ತ  ಶಿಕ್ಷಕರು ಹಾಗೂ  ಸಾಹಿತಿಗಳಾದ    ಆರ್  ಕೆ  ಹೊನ್ನೆಗುಂಡಿ  ಯವರು ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು. S D M C ಅಧ್ಯಕ್ಷರಾದ  ನಾಗರಾಜ್ ಅಂಬಿಗ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಮುಖ್ಯ ಶಿಕ್ಷಕರಾದ  M G ನಾಯ್ಕ ಇವರು ಮಾತನಾಡಿ ತಾಲೂಕಿನಲ್ಲಿಯೇ ಮೊದಲ ಸರಕಾರಿ ಪ್ರಾಥಮಿಕ ಶಾಲೆಯಾಗಿದ್ದರು, ಸಹ ಇತ್ತೀಚಿಗಿನ ದಿನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ಬೇಸರದ ಸಂಗತಿಯಾಗಿದೆ. ಆ ನಿಟ್ಟಿನಲ್ಲಿ ಶಾಲಾ ಪುನಶ್ಚೇತನ ಯೋಜನೆಯ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು  ಮಾಡುತ್ತಾ  ಬಂದಿದ್ದೇವೆ. ಈ ವಾರ್ಷಿಕೋತ್ಸವ  ಸಹ ಅದರ ಒಂದು ಭಾಗವಾಗಿದೆ. ಸುಮಾರು ಮೂರು ದಶಕಗಳ ನಂತರ ಇಂತಹದೊಂದು ಸಂಭ್ರಮದ ಕ್ಷಣಗಳು ಶಾಲೆಯು ಸಾಕ್ಷೆಯಾಗಿದೆ ಎಂದು ಶಾಲೆಯ ಪುನಶ್ಚೇತನ  ಕಾರ್ಯಗಳಿಗೆ ತನು ಮನ ಧನ ಗಳಿಂದ ಸಹಾಯ ಮಾಡಿದ ಗಣ್ಯರನ್ನು ಈ  ವೇಳೆ  ಸನ್ಮಾನಿಸಲಾಯಿತು.   ವಿವಿಧ ಸ್ಪರ್ಧೆಗಳಲ್ಲಿ  ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ  ಸಾಂಸ್ಕೃತಿಕ ಕಾರ್ಯಕ್ರಮಗಳು  ಸಾರ್ವಜನಿಕರನ್ನು ರಂಜಿಸಿದವು.