ಕುಮಟಾ : ನಗರದ ಪುರಭವನದ ಆವರಣದಲ್ಲಿ ‘ಸಂಜೀವಿನಿ ಸಂತೆ’ ಎನ್ನುವ ಮಹಿಳೆಯರ ವಿವಿಧ ಗೃಹೋತ್ಪನ್ನ ಸಂತೆಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಂಜೀವಿನಿ ತಾಲ್ಲೂಕು ಅಭಿಯಾನ ಘಟಕ ಹಾಗೂ ಪುರಸಭೆ ಕುಮಟಾ ಮತ್ತು ಶ್ರೀ ರಕ್ಷಾ ಸಂಜೀವಿನಿ ಗ್ರಾ ಪಂ ಮಟ್ಟದ ಒಕ್ಕೂಟ ಹೆಗಡೆ ಇದರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸಂಜೀವಿನಿ ಸಂತೆ’ ಕಾರ್ಯಕ್ರಮ ಸಂಘಟನೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಅವರಲ್ಲಿರುವ ಕೌಶಲ್ಯದ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ‘ಸಂಜೀವಿನಿ ಸಂತೆ’ ಎನ್ನುವ ವಿನೂತನ ಕಾರ್ಯಕ್ರಮ.
ಇಲ್ಲಿ ಮಹಿಳೆಯರು ಸ್ವತಃ ತಯಾರಿಸಿದ ವಿವಿಧ ತಿಂಡಿತಿನಿಸುಗಳು, ಗೃಹೋತ್ಪನ್ನ ವಸ್ತುಗಳು ಮಾರಾಟಕ್ಕೆ ಲಭ್ಯ ಇದೆ ವಿವಿಧ ವಸ್ತುಗಳು ಸಿಗುವುದು ವಿಶೇಷ.. ಸಾರ್ವಜನಿಕರು ಹೆಚ್ಚಿನ ಖರೀದಿ ಮಾಡಿ ತಾವೇ ಸ್ವತಃ ತಯಾರಿಸಿದ ನಮ್ಮ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಇವತ್ತು ನಮ್ಮ ಎಲ್ಲ ಇಲಾಖೆ ಅಧಿಕಾರಿಗಳನ್ನು ನಾನು ಖರೀದಿಸುವಂತೆ ತಿಳಿಸಿದಾಗ ಎಲ್ಲರೂ ಕೂಡ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಸಂತಸ ಪಟ್ಟರು ಇದರಿಂದ ಅವರಿಗೂ ವ್ಯಾಪಾರ ಆಗಿದೆ.. ಈ ರೀತಿಯ ಸಂತೆಯನ್ನು ಇನ್ನು ತಿಂಗಳಿಗೊಮ್ಮೆ ಮಾಡುವಂತೆ ತಾ ಪಂ ಸಿ ಟಿ ನಾಯ್ಕ ರವರಿಗೆ ತಿಳಿಸಿದ್ದೆ ಎಂದರು
ಈ ಸಂದರ್ಭದಲ್ಲಿ ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಸಿ ಟಿ ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ ನಾಯಕ, ಬಿಇಓ ರಾಜೇಂದ್ರ ಭಟ್ಟ, ಡಯಟ್ ಪ್ರಾಂಶುಪಾಲ ಈಶ್ವರ ನಾಯ್ಕ, ಸಿಪಿಐ ತಿಮ್ಮಪ್ಪ ನಾಯ್ಕ , ಪಿಎಸ್ಐ ನವೀನ ನಾಯ್ಕ, ರವಿ ಗುಡ್ಡಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ನಿಕಟಪೂರ್ವ ಅಧ್ಯಕ್ಷೆ ಮೋಹಿನಿ ಗೌಡ ಹಾಗೂ ಇತರ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮೀಣ ಭಾಗದ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.