ಬೆಂಗಳೂರು:ಹಿಜಬ್-ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಹೈಕೋರ್ಟ ನಲ್ಲಿ ವಿಚಾರಣೆ ನಡೆದಿದ್ದು ವಿಚಾರಣೆ ಮುಗಿಯುವವರೆಗೂ ಮೌಖಿಕ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಶಾಲೆ ಅಥವಾ ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ಮತ್ತು ಶಾಲು ಧರಿಸಿ ಹೋಗುವಂತಿಲ್ಲವೆಂದು ತ್ರಿಸದಸ್ಯ ಪೀಠ ಮೌಖಿಕವಾಗಿ ಆದೇಶಿಸಿದೆ.
ಆದರೆ ಇದು ಅಂತಿಮ ಆದೇಶವಲ್ಲವೆಂದಿದೆ.
ಪ್ರಕರಣವನ್ನು ಸೋಮವಾರ ಮಧ್ಯಾಹ್ನ 02:30 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಧಾರ್ಮಿಕ ವಸ್ತುಗಳನ್ನ ಬಳಕೆ ಮಾಡುವವಂತಿಲ್ಲ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
ಮಧ್ಯಾಂತರ ಆದೇಶದ ಹಿನ್ನಲೆಯಲ್ಲಿ ಶಾಲೆ ಕಾಲೇಜು ಆರಂಭಿಸುವಂತೆ ತ್ರಿಸದಸ್ಯ ಪೀಠ ಮೌಖಿಕವಾಗಿ ತಿಳಿಸಿದೆ. ಈ ವಿಷಯವನ್ನ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿತ್ತು. ಆದರೆ ಮಾನ್ಯ ತ್ರಿಸದಸ್ಯ ಪೀಠವು ಇಂದು ಮೌಖಿಕ ಆದೇಶವನ್ನ ಹೊರಡಿಸಿ ಪ್ರಕರಣವನ್ನ ಸೋಮವಾರಕ್ಕೆ ಮುಂದೂಡಿದೆ.