Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ;ಸೂಕ್ತ ತನಿಖೆಗೆ ಒಂದು ತಿಂಗಳ ಗಡವು

ಜೋಯಿಡಾ: ಅರಣ್ಯ ಇಲಾಖೆಯು ಜೋಯಿಡಾ ತಾಲೂಕಿನಾದ್ಯಂತ ಸುಮಾರು ಐದು ಸಾವಿರಕ್ಕಿಂತ ಮಿಕ್ಕಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಗಿಡ-ಮರ ಕಡಿದು ಕೋಟ್ಯಾಂತರ ರೂಪಾಯಿ ಮೌಲ್ಯ ನಾಶಕ್ಕೆ ಕಾರಣವಾಗಿರುವ ಘಟನೆ ನಡೆದಿದ್ದು, ನಿರಂತರ ಅರಣ್ಯವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸಮಗ್ರ ತನಿಖೆಗೆ ಒಂದು ತಿಂಗಳಿನಲ್ಲಿ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. 
ಅವರು ಅರಣ್ಯವಾಸಿಗಳು ಬೃಹತ್ ರ‍್ಯಾಲಿ,  ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಈ ಅರಣ್ಯವಾಸಿಗಳು ಕಾಡಿನ ಕಿರು ಉತ್ಪನ್ನ ಅನುಭವಿಸುವ ಹಕ್ಕಿಗೆ ಒತ್ತಾಯಿಸಿ ಅರಣ್ಯವಾಸಿಗಳ ಮೇಲೆ ಕಿರುಕುಳ, ದೌರ್ಜನ್ಯ ನೀಡುವುದು, ಒತ್ತಾಯ ಪೂರ್ವಕವಾಗಿ ಹುಲಿ ಯೋಜನೆ ಪ್ಯಾಕೇಜಿನ ಮೂಲಕ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು, ಪ್ರತೀ ಸೋಮವಾರ ಅರಣ್ಯ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸಬೇಕೆಂಬ ಸರಕಾರದ ಆದೇಶ ಹಾಗೂ ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮಗಳ ಬಗ್ಗೆ ಖಂಡಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರತಿಭಟನೆಯ ರ‍್ಯಾಲಿ ಜೋಯಿಡಾದ ತಹಶೀಲ್ದಾರ ಕಛೇರಿಯವರೆಗೂ ಆಗಮಿಸಿತು.  ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ಕಾರವಾರ ಎ.ಸಿ ಮೂಲಕ ಮುಂದಿನ ಒಂದು ತಿಂಗಳಿನಲ್ಲಿ ಅರಣ್ಯವಾಸಿಗಳ ಮೇಲಾಗುವ ದೌರ್ಜನ್ಯ ಹಾಗೂ ಐದು ಸಾವಿರಕ್ಕಿಂತ ಹೆಚ್ಚು ಮರ ಕಡಿದ ಕುರಿತು ಸಮಗ್ರ ತನಿಖೆ ಜರುಗಿಸಲಾಗುವುದೆಂದು ಆಶ್ವಾಸನೆ ನೀಡಿದರು.  ಇದರಿಂದ ಧರಣಿ ಅರ್ಧಕ್ಕೆ ಹಿಂಪಡೆಯಲಾಯಿತು .

 ಈ ವೇಳೆ ಜೋಯಿಡಾ ತಹಶೀಲ್ದಾರ್ ಸಂಧ್ಯಾ ಕಾಂಬಳೆ, ಅರಣ್ಯಾಧಿಕಾರಿಗಳಾದ ಸಿ.ಟಿ ನಾಯ್ಕ ಆರ್.ಎಫ್.ಓ ಜೋಯಿಡಾ, ಶಿವಾನಂದ ಗೌಡ ಪಾಟೀಲ್ ಆರ್.ಎಫ್.ಓ ಕುಂಭಾರವಾಡ  ಅವರು ಉಪಸ್ಥಿತರಿದ್ದರು.

  ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಸುಭಾಷ್ ಗಾವಡಾ, ಪ್ರಭಾಕರ ವೇಳಿಪ್, ಅರುಣ ಕಾಂಬ್ರೆಕರ್ ಗ್ರಾಮ ಪಂಚಾಯತ ಅಧ್ಯಕ್ಷ ಜೋಯಿಡಾ, ಮಾಬ್ಲು ಕುಂದಲಕರ, ಬುದೋ ಕಾವೇಕರ, ದೇವಿದಾಸ ದೇಸಾಯಿ, ಅರುಣ ಗಣೇಶಗುಡಿ ಗ್ರಾಮ ಪಂಚಾಯತ ಸದಸ್ಯರು ಜೋಯಿಡಾ, ಸುಭಾಷ್ ವೇಳಿಪ, ಅಪ್ಪಾ ಗಾಂವಕರ ಪ್ರಧಾನಿ ಮುಂತಾದವರು ಭಾಗವಹಿಸಿದ್ದರು.