ಭಟ್ಕಳ: ಮುರ್ಡೆಶ್ವರದ ಬೀನಾ ವೈಧ್ಯ ಡಿಗ್ರಿ ಮತ್ತು ಪಿಯು ಕಾಲೇಜ್ನಲ್ಲಿ ಬೀನ ಪ್ರೋ ಕಬ್ಬಡಿ ಲೀಗ್ ೨೦೨೨ ಪಂದ್ಯಾವಳಿಯನ್ನು ಫೆ.೧೨ ರಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಭಟ್ಕಳ ಟೌನ್ ಪಿಎಸ್‌ಐ ಯಲ್ಲಪ್ಪ ಉದ್ವಾಟಿಸಿದರು. ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕರು ಹಾಗೂ ಬೀನಾ ವೈದ್ಯ ಸಂಸ್ಥೆಯ ಅಧ್ಯಕ್ಷರಾದ ಮಂಕಾಳು ವೈದ್ಯ ಅವರು ಏನನ್ನಾದರೂ ಸಾಧಿಸಲು ಮುಖ್ಯವಾಗಿ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕ ಅವಕಾಶವನ್ನು ತಾಳ್ಮೆಯಿಂದ ಸರಿಯಾದ ರೀತಿಯಲ್ಲಿ,ಉಪಯೋಗಿಸಕೊಳ್ಳಬೇಕು
,ವಿಧ್ಯಾರ್ಥಿಗಳ ಸಾಧನೆಗೆ ಬೇಕಾದ ಎಲ್ಲಾ ಅವಕಾಶಗಳನ್ನು ಸಂಸ್ಥೆ ಮಾಡಿಕೊಡುತ್ತಿದೆ. ಹಾಗೂ ಎಲ್ಲಾ ರೀತಿಯ ಸಹಾಯ ಸಹಕಾರಕ್ಕೆ ತಾನು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.
ಸಂಸ್ಥೆಯ ಟ್ರಸ್ಟಿ ಆಡಳಿತ ಮಂಡಳಿಯ ನಿರ್ದೇಶಕಿಯಾದ ಪುಪ್ಪಲತಾ ವೈದ್ಯ ಮಾತನಾಡಿ, ಬಾಗವಹಿಸಿರುವ ಎಲ್ಲಾ ಟೀಮ್ ಗೆಲ್ಲಲು ಸಾಧ್ಯವಿಲ್ಲ,ಪಂದ್ಯದಲ್ಲಿ ಸೋಲು ಗೆಲುವು ಮುಖ್ಯವಲ್ಲ ನಿಮ್ಮದೇ ಆದ ಛಾಪು ಮೂಡಿಸುವುದು ಮುಖ್ಯ, ಬದ್ದತೆ,ಛಲ,ಶಿಸ್ತು, ಆಸಕ್ತಿ,ಧೈರ್ಯ,ಪ್ರಯತ್ನ ಇದ್ದರೆ ಮಾತ್ರ ಆಟದಲ್ಲಿ ಮತ್ತು ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸುವದು ಸಾಧ್ಯ, ಅಂತಹ ಕ್ರೀಡೆಯಲ್ಲಿ ಗೆಲ್ಲವು ಸಾಧಿಸಬೇಕಾದರೆ ಸಂಪೂರ್ಣವಾದ ಪ್ರಾಮಾಣಿಕ ಮಾಸಸಿಕ ಮತ್ತು ದೈಹಿಕ ಪ್ರಯತ್ನ ನಿಮ್ಮದಾಗಬೇಕು ಹೇಳಿದರು.