ಕುಮಟಾ: ತಾಲೂಕಿನ ಬಗ್ಗೋಣ ಗ್ರಾಮದ ಜನತೆಯು ಕಳೆದ 50 ವರ್ಷಗಳಿಂದ ಜನತಾ ಪ್ಲಾಟ್‌ನಲ್ಲಿ ವಾಸವಾಗಿದ್ದರು. ಆದರೆ ಸರಕಾರದಿಂದ ಸಿಗುವ ಸೌಲಭ್ಯದಿಂದ ಇವರು ವಂಚಿತರಾಗುತ್ತಿದ್ದರು. ಆದರೆ ಅಲ್ಲಿನ ಗ್ರಾಮಸ್ಥರಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳು ಪಡೆಯಬೇಕು ಎನ್ನುವುದು ಹಲವು ವರ್ಷದ ಕನಸು ಆಗಿತ್ತು. ಆದರೆ ಈಗ ಅವರ ಕನಸು, ನನಸಾಗಿದೆ.
ಹೌದು, ಜನತಾ ಪ್ಲಾಟ್‌ನ 20 ಮನೆಗಳಲ್ಲಿ 16 ಮನೆಗಳಿಗೆ ಶಾಸಕ ದಿನಕರ ಶೆಟ್ಟಿಯವರು ಈ ಸ್ವತ್ತುನ್ನು ಹಸ್ತಾಂತರಿಸಿದರು. ನಂತರ ಮಾಡಿದ ಶಾಸಕ ದಿನಕರ ಶೆಟ್ಟಿ, ಕಳೆದ ಹತ್ತು ವರ್ಷಗಳಿಂದ ಜನತಾ ಪ್ಲಾಟ್ ನಿವಾಸಿಗಳು ಈ ಪ್ಲಾಟ್ ಅನ್ನು ತಮ್ಮ ಹೆಸರಿಗೆ ಮಾಡಿಕೊಡಿ ಎಂದು ನಾನು 2008ರಲ್ಲಿ ಶಾಸಕನಾಗಿದ್ದ ವೇಳೆಯಿಂದ ಮನವಿ ಮಾಡುತ್ತಿದ್ದರು.ಆಗ ನಾನು ಪ್ರಯತ್ನ ಮಾಡಿದ್ದೆ ಆದರೆ, ನಾನು ಆಗ ಜೆಡಿಎಸ್‌ನಲ್ಲಿ ಶಾಸಕನಾಗಿದ್ದೆ, ಆಗ ಪಕ್ಷ ಅಧಿಕಾರದಲ್ಲಿ ಇಲ್ಲವಾಗಿತ್ತು. ಇದರಿಂದ ಆಗ ಸ್ವಲ್ಪ ಕಷ್ಟವಾಗಿತ್ತು .ನಾನು ಈಗ ಬಿಜೆಪಿಗೆ ಸೇರಿದ ಬಳಿಕ ಈ ಭಾಗದ ಗ್ರಾಮಸ್ಥರ ಕೆಲಸ ಮಾಡಿಕೊಟ್ಟಿದ್ದೇನೆ. ಈ ಸ್ವತ್ತು ಸಮಸ್ಯೆ ರಾಜ್ಯಾದ್ಯಂತ ಕಾಡುತ್ತಿರುವ ಸಮಸ್ಯೆಯಾಗಿದ್ದು , ಈ ಸ್ವತ್ತು ಸಿಗದೇ ಇದ್ದರೆ ನಿಮಗೆ ಯಾವುದೇ ಸರಕಾರದ ಸೌಲಭ್ಯಗಳು ಸಿಗುತ್ತಿರಲ್ಲಲ್ಲ. ನಾನು ನಿಮಗೆ ಈ ಸ್ವತ್ತುನ್ನು ನೀಡಿದ್ದೇನೆ, ಕೆಲವು ಜನರು ಶಾಸಕರು ಹಣವನ್ನು ತೆಗೆದುಕೊಂಡು ಈ ಸ್ವತ್ತು ಮಾಡಿಕೊಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬೇಸರ ತಂದಿದೆ ಎಂದು ಹೇಳಿದರು.ನಂತರ ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ್ ಎಂ.ಕೆ ಮಾತನಾಡಿ 20 ಪಲಾನುಭವಿಗಳು ಇರುವ ಜನತಾ ಪ್ಲಾಟ್ ಬಗ್ಗೋಣ ಗ್ರಾಮದಲ್ಲಿ ಇರುವುದು ನಮ್ಮ ಗಮನಕ್ಕೆ ಬಂದಿಲ್ಲವಾಗಿತ್ತು. ಈ ವಾರ್ಡಿನ ಸದಸ್ಯರು ನಮ್ಮ ಗಮನಕ್ಕೆ ತಂದಿದ್ದು ನಂತರದಲ್ಲಿ ನಂತರ ಇದರ ಬಗ್ಗೆ ಚರ್ಚೆ ಮಾಡಿ ಪಲಾನುಭವಿಗೆ ಬೇಕಾದ ದಾಖಲೆಗಳನ್ನು ತರುವಂತೆ ಸೂಚಿಸಿದ್ದೇವೆ ಆದರೆ ಶಾಸಕರ ನಿರಂತರ ಪ್ರಯತ್ನದಿಂದ ಜನರಿಗೆ ಈ ಸ್ವತ್ತು ಸಿಗಲು ಸಾಧ್ಯವಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಮೋಹಿನಿ ಗೌಡ, ಸದಸ್ಯರಾದ ಶೈಲಾ ಗೌಡ, ತುಳುಸು ಗೌಡ, ಸೇರಿದಂತೆ ಗ್ರಾಮಸ್ಥರು ಇದ್ದರು.