Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬಿಜೆಪಿಗೆ ಸೇರ್ಪಡೆಗೊಂಡ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ನೀಲಪ್ಪ ಗೌಡ

ಕುಮಟಾ: ಹೀರೆಗುತ್ತಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನೀಲಪ್ಪ ಗೌಡ ಹಾಗೂ ಸಂತೆಗುಳಿ, ಮಿರ್ಜಾನ ಭಾಗದ ವಿವಿಧ ಪಕ್ಷದ ಕಾರ್ಯಕರ್ತರು, ಬಿಜೆಪಿಯ ಪಕ್ಷವನ್ನು ಶಾಸಕ ದಿನಕರ ಶೆಟ್ಟಿಯ ನೇತೃತ್ವದಲ್ಲಿ  ಬಿಜೆಪಿಯ ಕಾರ್ಯಾಲಯದಲ್ಲಿ  ಸೆರ್ಪಡೆಗೊಂಡರು. 
ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿಯ ಪ್ರಮುಖರು ಬಿಜೆಪಿಯ ಬಾವುಟವನ್ನು ನೀಡಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿಯವರು ನಾನು ಮೊದಲು ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ನಂತರವೂ ನೀಲಪ್ಪ ಗೌಡವರಿಗೆ ಬಿಜೆಪಿಗೆ ಬರುವಂತೆ ಆಹ್ವಾನವನ್ನು ನೀಡಿದ್ದೇನೆ, ಆದರೆ ಆ ಸಮಯದಲ್ಲಿ ನೀಲಪ್ಪ ಗೌಡವರು ನಾನು ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲೇ ಮುಂದುವರೆಯುತ್ತೇನೆ. ಮುಂದಿನ ದಿನಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಗೋಳ್ಳಬೇಕು ಎನ್ನುವ ಯೋಚನೆ ಬಂದ್ರೆ ಖಂಡಿತ ನಿಮ್ಮ ಜೋತೆ ಬರುತ್ತೇನೆ ಎಂದು ಹೇಳಿದ್ರೂ. 
ಈಗ ಆ ಕಾಲ ಕೂಡಿ ಬಂದಿದೆ. ಅವರ ಜೋತೆ ಅವರ ಬೆಂಬಲಿಗರೆಲ್ಲರೂ ಬಿಜೆಪಿಯ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಪಕ್ಷ ಸೇರ್ಪಡೆಗೊಂಡು ಮಾತನಾಡಿದ ನೀಲಪ್ಪ ಗೌಡ ಅವರು ನಾನು ಹಣದ ಹಿಂದೆ ಬಿದ್ದು ರಾಜಕಾರಣ ಮಾಡಿದ ವ್ಯಕ್ತಿಯಲ್ಲ. ನನ್ನ ಜೋತೆ ಇರುವ ಬೆಂಬಲಿಗರು ಕೂಡಾ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಿಜೆಪಿಯನ್ನು  ಅಧಿಕಾರಕ್ಕೆ ಬರುವಂತೆ ಪ್ರಯತ್ನ ಮಾಡುತ್ತೇವೆ ಶಾಸಕ ದಿನಕರ ಶೆಟ್ಟಿಯವರು ಕೂಡಾ ಜನ ಸಾಮಾನ್ಯರ ಜೋತೆ ಸದಾ ಇರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ತಾಲೂಕಾಧ್ಯಕ್ಷರಾದ ಹೆಮಂತ ಕುಮಾರ, ಪುರಸಭಾ ಅಧ್ಯಕ್ಷರಾದ ಮೋಹಿನಿ ಗೌಡ, ಮುಖಂಡರಾದ ಜಿ.ಜಿ.ಹೆಗಡೆ, ಮಾಜಿ ಜಿ.ಪಂ ಸದಸ್ಯರಾದ ಗಜಾನನ ಪೈ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಇದ್ದರು.