ಕುಮಟಾ: ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ ಹಾಗೂ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಕುಮಟಾ ರೋಟರೆಕ್ಟ್ ಅಧ್ಯಕ್ಷೆ ಹಾಗೂ ಸಾಮಾಜಿಕ ಕಾರ್ಯಕರ್ತೆ ನಳೀನಾ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.ಕುಮಟಾ ಪುರಸಭೆ ಕಚೇರಿಗೆ ತೆರಳಿ ಮುಖ್ಯಾಧಿಕಾರಿಯವರನ್ನು ಅಭಿನಂದಿಸಿ ಪೌರಕಾರ್ಮಿಕರಿಗೆ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ನಂತರ ಮಾತನಾಡಿದ ಮುಖ್ಯಾಧಿಕಾರಿ ಸುರೇಶ ಎಂ.ಕೆ ಕ್ಷೇತ್ರದ ಶಾಸಕರ ಸಲಹೆ, ಸಹಕಾರ, ಎಲ್ಲಾ ಸದಸ್ಯರ ಮತ್ತು ಮುಖ್ಯವಾಗಿ ಕುಮಟಾ ನಾಗರಿಕರ ಸಹಕಾರದೊಂದಿಗೆ ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.