ಗೋಕರ್ಣ: ನೀರಿನ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ಇಲ್ಲಿನ ಮುಖ್ಯ ಕಡಲತೀರದಲ್ಲಿ ಸಮುದ್ರದಲ್ಲಿ ರಕ್ಷಿಸಲಾಗಿದೆ.
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯ ಮುತ್ತು ಹಿರೇಮಠ (24) ಪ್ರಾಣಾಪಾಯದಿಂದ ಪಾರಾಗಿದೆ ಬಂದ ಪ್ರವಾಸಿಗರಿಗರಾಗಿದ್ದಾರೆ. ಹಾನಗಲ್ ನಿಂದ ಕುಟುಂಬ ಸಮೇತರಾಗಿ ಒಟ್ಟು, 8 ಜನರ ತಂಡ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಆವೇಳೆ ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಈ ಘಟನೆ ಸಂಭವಿಸಿದೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಬೋಟಿಂಗ್ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಲಾಗಿದೆ.