ಕುಮಟಾ: ಮಹಾಗಣಪತಿ ಗೆಳೆಯರ ಬಳಗ ಮತ್ತು ತಾರೀಬೀರಪ್ಪ ಗೆಳೆಯರ ಬಳಗ ಉಪ್ಪಿನಪಟ್ಟಣ ಇವರು ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಶಾಸಕರಾದ ದಿನಕರ ಕೆ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಅವರು ಅಳಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸುಮಾರು 12ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ಭಾಗದ ಜಿ.ಪಂ ನಿಕಟ ಪೂರ್ವ ಸದಸ್ಯರಾದ ಗಜಾನನ ಪೈ ಅವರು ತುಂಬಾ ಮುತುವರ್ಜಿ ವಹಿಸಿ ಈ ಭಾಗಕ್ಕೆ ಆಗಬೇಕಾದ ಅಭಿವೃದ್ದಿ ಕಾರ್ಯಕ್ರಮಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಈ ಭಾಗದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕತಗಲ್ ಭಾಗದ ಜನರಿಗೆ ಸಲ್ಲುತ್ತದೆ ಎಂದು ಹೇಳಿದರು.
ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಗಜಾನನ ಪೈರವರು ಅಂಕಣ ಉದ್ಘಾಟಿಸಿ ಮಾತನಾಡಿ ಉಪ್ಪಿನ ಪಟ್ಟಣದಲ್ಲಿ ಅತಿಯಾಗಿ ಮಳೆಬಿದ್ದಾಗ, ನೀರು ತುಂಬಿ ಪ್ರವಾಹ ಉಂಟಾದಾಗ, ನದಿಭಾಗದ ಜನರಿಗೆ ಬಹಳ ಸಮಸ್ಯೆ ಆಗುತ್ತದೆ. ಅದಕ್ಕೆ 15 ಎಕರೆ ಜಾಗದಲ್ಲಿ ಮನೆ ಕಟ್ಟಲು ಸರಕಾರಕ್ಕೆ ,ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ಬಗ್ಗೆ ಶಾಸಕರು ಇದರ ಬಗ್ಗೆ ಹೆಚ್ಚಿನ ಮುತವರ್ಜಿ ವಹಿಸಬೇಕು, ಅಲ್ಲದೆ ಕೆರೆ ಅಭಿವೃದ್ಧಿ ಹಾಗೂ ನೀರಿನ ಪೂರೈಕೆಯ ಬಗ್ಗೆ ಅನುಧಾನ ಬಿಡುಗಡೆ ಮಾಡುವಂತೆ ಶಾಸಕರಿಗೆ ಒತ್ತಾಯಿಸಿದರು.
ಉದ್ದೇಮೆದಾರರಾದ ಮಂಜುನಾಥ್ ಎಲ್ ನಾಯ್ಕ್ ಟ್ರೋಫಿ ಅನಾವರಣ ಮಾಡಿದರು.ಅಧ್ಯಕ್ಷತೆಯನ್ನು ಶಿಕ್ಷಕರಾದ ವಿನಾಯಕ್ ಭಟ್ ಉಪಸ್ಥಿತರಿದ್ದರು ಈ ಸಮಯದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರದ ಶ್ರೀಧರ ಪೈ, ಸದಸ್ಯರಾದ ಮಹೇಶ್ ದೇಶಭಂಡಾರಿ, ದೇವು ಗೌಡ, ಶ್ರೀಧರ ಗೌಡ, ದೀಪಕ್ ನಾಯ್ಕ್, ನಯನ ಗೌಡ, ಶಶಿಕಲಾ ಅಂಬಿಗ, ಹಾಗೂ ಊರ ಹಿರಿಯ ನಾಗರಿಕರದ ವಿಷ್ಣು ಶಾನಭಾಗ್ ಹಾಗೂ ಎಲ್ಲ ಕ್ರೀಡಾ ಪಟುಗಳು, ಊರ ನಾಗರಿಕರಿಗೆ ಉಪಸ್ಥಿತರಿದ್ದರು.