ಕುಮಟಾ: ಸಮೀಪದ ಗ್ರಾಮೀಣ ಭಾಗದ ಪ್ರೌಢಶಾಲೆಯಾದ ಹೊನ್ನಾವರ ತಾಲೂಕಿನ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98.18% ಫಲಿತಾಂಶವನ್ನು ಪಡೆದಿದೆ.
ಕುಮಾರಿ ಸ್ವಾತಿ ಸುರೇಶ ನಾಯ್ಕ ಇವಳು ಶೇ. 95.68 ಫಲಿತಾಂಶವನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನದೊಂದಿಗೆ ಕನ್ನಡಕ್ಕೆ 125ಕ್ಕೆ 125 ಅಂಕಗಳನ್ನು ಪಡೆದಿರುತ್ತಾಳೆ. ಕುಮಾರ ಮಹಮ್ಮದ್ ರಜಾ ಎ. ಮುಲ್ಲಾ ಇವನು ಶೇ 94.24 ಫಲಿತಾಂಶವನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನದೊಂದಿಗೆ ಹಿಂದಿ ವಿಷಯಕ್ಕೆ 100 ಕ್ಕೆ 100 ಅಂಕ ಪಡೆದಿರುತ್ತಾನೆ. ಕುಮಾರಿ ಅಚಿಂತ್ಯಾ ರವೀಂದ್ರ ಭಂಡಾರಿ ಇವಳು ಶೇ ೯೩.೯೨ ಫಲಿತಾಂಶವನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾಳೆ. ಸಂಸ್ಕೃತದಲ್ಲಿ 1 ವಿದ್ಯಾರ್ಥಿನಿ 100ಕ್ಕೆ 100 ಅಂಕ ಪಡೆದಿರುತ್ತಾಳೆ. ಹಿಂದಿ, ಸಂಸ್ಕೃತ, ಸಮಾಜ ವಿಜ್ಞಾನ ಈ ವಿಷಯಗಳಲ್ಲಿ 100ಕ್ಕೆ 100ಫಲಿತಾಂಶವನ್ನು ಪಡೆದಿರುತ್ತಾರೆ. ೬ ವಿದ್ಯಾರ್ಥಿಗಳು ಉನ್ನತ ಶ್ರೇಣಿ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಅಧ್ಯಕ್ಷರಾದ ನಾರಾಯಣ ಮಲ್ಲಾಪುರ ಮತ್ತು ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹಾಗೂ ಶಾಲಾ ಮುಖ್ಯಾಧ್ಯಾಪಕರಾದ ಎಂ. ಟಿ. ಗೌಡ ಇವರು ಈ ಸಾಧನೆಗಾಗಿ ಅಭಿನಂದಿಸಿರುತ್ತಾರೆ.