ಕುಮಟಾ: ವಿಧಾನಸಭಾ ಚುನಾವಣೆಯು ಶಾಂತಿಯುವಾಗಿ ನಡೆಯಿತು. ಬಿಜೆಪಿಯ ಅಭ್ಯರ್ಥಿಯಾದ ದಿನಕರ ಶೆಟ್ಟಿ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. ತಾಲೂಕಿನ ಗಿಬ್ ಹೈಸ್ಕೂಲ್‌ನಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಉತ್ತಮವಾದ ಬಿಜೆಪಿಯ ಪರ ಇರುವಂತಹ ವಾತಾರವಣವಿದೆ. ಈ ಹಿನ್ನಲೆಯಲ್ಲಿ ಭಾರಿ ನೂರಕ್ಕೆ ನೂರಷ್ಟು ಗೆಲ್ಲುವ ವಿಶ್ವಾಸವಿದೆ. ಎಲ್ಲಾ ಬೂತ್‌ನಲ್ಲಿ ಬಿಜೆಪಿಯ ಪರ ಒಲವು ಇರುವಂಹ ದೃಶ್ಯ ಕಂಡು ಬಂದಿದೆ ಎಂದರು.